
ವಾಷಿಂಗ್ ಟನ್: ವಾಷಿಂಗ್ಟನ್‍ನಲ್ಲಿ ಗುರುವಾರ ನಡೆದ ಬರಾಕ್ ಒಬಾಮ ನವಾಜ್ ಷರೀಫ್ ಭೇಟಿಯಲ್ಲಿ, ನವಾಜ್ ಮಾತನಾಡಿದ್ದಕ್ಕಿಂತ ಕೇಳಿಸಿಕೊಂಡದ್ದೇ ಹೆಚ್ಚು ಎಂಬ ವಿಶ್ಲೇಷಣೆಯನ್ನು ಪಾಕಿಸ್ತಾನದ ಪತ್ರಿಕೆಯೊಂದು ಮಾಡಿದೆ.
ಅಫ್ಘಾನಿಸ್ತಾನದ ಜತೆ ತನ್ನ ಸಂಬಂಧ ಹಾಗೂ ಉಗ್ರರ ಮೇಲಿನ ಕ್ರಮಗಳ ಬಗ್ಗೆ ತನ್ನ ಬದ್ಧತೆಯನ್ನು ಪ್ರತಿಪಾದಿಸಲಿಕ್ಕೆಂದೇ ನವಾಜ್ ಅಮೆರಿಕಕ್ಕೆ ಭೇಟಿ ನೀಡಿದಂತಿದೆ. ಈ ಭೇಟಿಯಿಂದ ಇತರ ಪ್ರಮುಖ ವಿಚಾರಗಳೇನೂ ಪ್ರತಿಪಾದನೆಗೊಂಡಿಲ್ಲ. ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಭಾರತದ ಹಸ್ತಕ್ಷೇಪ ಬಗ್ಗೆ ಅಮೆರಿಕ ತಾಳಿರುವ ನೋ ಕಾಮೆಂಟ್ಸ್ ನಿಲುವು ನಮಗೆ ಹಿನ್ನಡೆ.
ಭಾರತ ಪಾಕ್ ಗಡಿಯಲ್ಲಿ ಬಾಂಧವ್ಯ ವರ್ಧನೆಯ ಕ್ರಮಗಳ ಬಗ್ಗೆ ಮತ್ತು ಹೆಚ್ಚುತ್ತಿರುವ ಪರಮಾಣು ಭಯೋತ್ಪಾದನೆಯ ಆತಂಕಗಳ ಬಗ್ಗೆ ಜಂಟಿ ಹೇಳಿಕೆಯಲ್ಲಿರುವ ಮಾತುಗಳನ್ನು ಗಮನಿಸಿದರೆ, ನವಾಜ್ ಅಲ್ಲಿ ಒಬಾಮ ಮಾತುಗಳನ್ನು ಸುಮ್ಮನೆ ಕೇಳಿಸಿಕೊಂಡಿದ್ದು ನಿಜ ಅನ್ನಿಸುತ್ತದೆ ಎಂದು ಪಾಕ್‍ನ ನ್ಯೂಸ್ ಇಂಟರ್‍ನ್ಯಾಷನಲ್ ಪತ್ರಿಕೆ ಸಂಪಾದಕೀಯದಲ್ಲಿ ಬರೆದಿದೆ.
ಈ ನಡುವೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತದ ಪ್ರಧಾನಿ ಮೋದಿ ಒತೆಗಿನ ಸಂಬಂಧ ಬಹಳ ಮೌಲ್ಯಯುತವೆಂದು ಭಾವಿಸಿದ್ದಾರೆ ಮತ್ತು ನಿರ್ದಿಷ್ಟವಾಗಿ ವಾಣಿಜ್ಯ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಇಬ್ಬರೂ ಬಲಿಷ್ಠ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಶ್ವೇತಭವನ ಹೇಳಿದೆ.
Advertisement