ಬಾಲಿಯಲ್ಲಿ ಛೋಟಾ ರಾಜನ್ ಭೇಟಿ ಮಾಡಿದ ಭಾರತೀಯ ಅಧಿಕಾರಿ

ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಛೋಟಾ ರಾಜನ್ ನನ್ನು ಭಾರತೀಯ ಅಧಿಕಾರಿಯೊಬ್ಬರು...
ಛೋಟಾ ರಾಜನ್
ಛೋಟಾ ರಾಜನ್
ಇಂಡೋನೇಷ್ಯಾ: ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಛೋಟಾ ರಾಜನ್ ನನ್ನು ಭಾರತೀಯ ಅಧಿಕಾರಿಯೊಬ್ಬರು ಭಾನುವಾರ ಭೇಟಿಯಾಗಿದ್ದಾರೆ. 
ಬಾಲಿಗೆ ತೆರಳಿರುವ ಭಾರತೀಯ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಸಂಜೀವ್ ಅಗರ್ವಾಲ್ ಅವರು ಛೋಟಾ ರಾಜನ್ ನನ್ನು ಭೇಟಿಯಾಗಿದ್ದು, ರಾಜನ್ ಬಂಧನದ ನಂತರ ಭೇಟಿಯಾದ ಭಾರತದ ಮೊದಲ ಅಧಿಕಾರಿಯಾಗಿದ್ದಾರೆ. 
ಛೋಟಾ ರಾಜನ್ ಇಲ್ಲಿನ ಕಾರಾಗೃಹದಲ್ಲಿ ಆರೋಗ್ಯವಾಗಿದ್ದಾರೆ ಎಂದು ಇಂಡೋನೇಷ್ಯಾದ ಪೊಲೀಸರು ತಿಳಿಸಿದ್ದಾರೆ. ಛೋಟಾ ರಾಜನ್ ಓರ್ವ ಅಂತಾರಾಷ್ಟ್ರೀಯ ಅಪರಾಧಿ ಎಂದು ಸಾಬೀತಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಯಾವುದೇ ಅಡೆತಡೆ ಇಲ್ಲ ಎಂದು ತಿಳಿಸಿದ್ದರು. 
ಇನ್ನು ಇಂಡೋನೇಷ್ಯಾ ಪೊಲೀಸರ ವಶದಲ್ಲಿರುವ ಛೋಟಾ ರಾಜನ್‌‌ನನ್ನು ಶೀಘ್ರವೇ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಸರ್ಕಾರಗಳು ಮಾತುಕತೆ ನಡೆಸಲಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ಬಳಿಕ ದಾಖಲೆಗಳನ್ನು ಬದಲಾಯಿಸಿಕೊಳ್ಳಲಾಗುತ್ತದೆ ಎಂದು ಸಂಜೀವ್ ಅಗರ್ವಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com