ವಿಮಾನ ದುರಂತ: 224 ಮಂದಿ ಸಾವು

ರಷ್ಯಾದ ನಾಗರಿಕ ವಿಮಾನವೊಂದು ಈಜಿಪ್ಟ್ ನ ಸಿನಾಯ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದು,ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 224 ಮಂದಿ...ಮೃತಪಟ್ಟಿದ್ದಾರೆ. ವಿಮಾನವನ್ನು ತಾನು
ಭಗ್ನಾವಶೇಷಗೊಂಡ ವಿಮಾನ
ಭಗ್ನಾವಶೇಷಗೊಂಡ ವಿಮಾನ
Updated on

ಕೈರೋ: ರಷ್ಯಾದ ನಾಗರಿಕ ವಿಮಾನವೊಂದು ಈಜಿಪ್ಟ್ ನ ಸಿನಾಯ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದು,ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 224 ಮಂದಿ ಮೃತಪಟ್ಟಿದ್ದಾರೆ. ವಿಮಾನವನ್ನು ತಾನು ಹೊಡೆದುರುಳಿಸಿದ್ದೆಂದು ಐಎಸ್‍ಐಎಸ್ ಉಗ್ರರ ಸಂಘಟನೆ ಘೋಷಿಸಿಕೊಂಡಿದೆ. ಆದರೆ ಹೇಗೆ ಹೊಡೆದುರುಳಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ವಿಮಾನ ಕೆಂಪು ಸಮುದ್ರದ ಖ್ಯಾತ ಪ್ರವಾಸಿ ಸ್ಥಳ ಶಾಮ್ ಎಲ್ ಶೇಕ್‍ನಿಂದ ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ಗೆ ಹೊರಟಿತ್ತು.ಹೊರಟ ಸ್ವಲ್ಪವೇ ಹೊತ್ತಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಪೈಲೆಟ್ ಮಾಹಿತಿ ನೀಡಿದ. ಇದಾದ ಬಳಿಕ ವಿಮಾನ ಭೂನೆಲೆಯ ಜತೆ ಸಂಪರ್ಕ ಕಡಿದುಕೊಂಡಿತು. ದುರಂತ ತಾಂತ್ರಿಕ ದೋಷದಿಂದ ಸಂಭವಿಸಿರಬಹುದು ಎಂದು ಈಜಿಪ್ಟ್ ಪ್ರಧಾನಿ ಶರೀಫ್ ಇಸ್ಮಾಯಿಲ್ ಅವರ ಕಚೇರಿ ಆರಂಭದಲ್ಲಿ ಹೇಳಿಕೆ ನೀಡಿತು. ಇದಾದ ಸ್ವಲ್ಪವೇ ಹೊತ್ತಿನಲ್ಲಿ ಈ ವಿಮಾನದ ಪತನದ ಹೊಣೆಯನ್ನು ಉಗ್ರ ಸಂಘಟನೆ ಹೊತ್ತುಕೊಂಡಿದೆ.

ರಷ್ಯಾದ ಮಾಧ್ಯಮಗಳ ವರದಿಯಂತೆ ಈ ವಿಮಾನ ಪಶ್ಚಿಮ ಸೈಬೀರಿಯಾದ ಕೋಗಲಿಮಾವಿಯಾ ಎಂಬ ಸಂಸ್ಥೆಗೆ ಸೇರಿದೆ.ಉತ್ತರ ಸಿನಾಯ್ ನ ಅಲ್ ಆರಿಶ್ ನಗರದ ಬಳಿಯ ಬೆಟ್ಟ ಪ್ರಾಂತ್ಯದಲ್ಲಿ ವಿಮಾನದ ಅವಶೇಷಗಳು ದೊರೆತಿವೆ. ಸ್ಥಳಕ್ಕೆ ರಕ್ಷಣಾ ತಜ್ಞರು ಧಾವಿಸಿದ್ದು, ಕೆಟ್ಟ ಹವಾಮಾನದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿದೆ. ವಿಮಾನ ಸಂಪೂರ್ಣ ಭಸ್ಮವಾಗಿರುವು ದರಿಂದ ಯಾರೂ ಬದುಕುಳಿದಿರುವ ಸಂಭವವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ರಷ್ಯಾದವರಾಗಿದ್ದು, ಅವರಲ್ಲಿ 17 ಮಕ್ಕಳಿದ್ದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಈಗಾಗಲೇ ಮೃತದೇಹಗಳು ಸಿಕ್ಕಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com