ಗರ್ಭಪಾತಕ್ಕೊಳಗಾದ ಮಹಿಳೆಯರಿಗೆ ಕ್ಷಮೆ ಇರಲಿ

ಕ್ಯಾಥೊಲಿಕ್ ಚರ್ಚ್ ನ ಸಂಪ್ರದಾಯವಾದಿಗಳ ಭಾವನೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಪೋಪ್ ಫ್ರಾನ್ಸಿಸ್, ಗರ್ಭಪಾತಕ್ಕೊಳಗಾದ ಮಹಿಳೆಯರನ್ನೂ, ಅವರಿಗೆ...
ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ: ಕ್ಯಾಥೊಲಿಕ್ ಚರ್ಚ್ ನ ಸಂಪ್ರದಾಯವಾದಿಗಳ ಭಾವನೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಪೋಪ್ ಫ್ರಾನ್ಸಿಸ್, ಗರ್ಭಪಾತಕ್ಕೊಳಗಾದ ಮಹಿಳೆಯರನ್ನೂ, ಅವರಿಗೆ ಗರ್ಭಪಾತ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರನ್ನೂ ಕ್ಷಮಿಸಬೇಕೆಂದು ಧರ್ಮಗುರುಗಳಿಗೆ ಸಲಹೆ ಮಾಡಿದ್ದಾರೆ.

ಧರ್ಮ ಗುರುಗಳಿಗೆ ಬರೆದಿರುವ ಪತ್ರದಲ್ಲಿ ಈ ಸಲಹೆ ಮಾಡಿರುವ ಅವರು, ಈ ವರ್ಷದ ಡಿಸೆಂಬರ್ 8 ರಿಂದ 2016ರ ನವೆಂಬರ್ 20ರವರೆಗೆ ನಡೆಯುವ ಕ್ಷಮೆಯ ವರ್ಷ ಪ್ರಯುಕ್ತ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆ ದುರಂತವನ್ನು ಅನುಭವಿಸುವ ನೋವುಂಡ ಹೆಣ್ಣಿಗೆ ಸಾಂತ್ವನಬೇಕು. ಈ ಘಟನೆ ಅವರಲ್ಲಿ ಅಳಿಸಲಾಗದ ಗಾಯ ಮಾಡಿರುತ್ತದೆ. ಹೆಣ್ಣು ತುಂಬ ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿರುತ್ತಾಳೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪೋಪ್ ಪತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ವ್ಯಾಟಿಕನ್ ಸಿಟಿ, ಪೋಪ್ ಅವರು ಗರ್ಭಪಾತ ಸಾಮಾಜಿಕ ಪಿಡುಗು ಎಂದು ಹೇಳಿಲ್ಲ. ಇದು ಕೇವಲ ತಾತ್ಕಾಲಿಕ ನಿರ್ಧಾರ. ಒಂದು ವರ್ಷದ ಅವಧಿಗೆ ಮಾತ್ರ ಇದು ಅನ್ವಯ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com