
ವಾಷಿಂಗ್ಟನ್: ತಾಲಿಬಾನ್ ನಾಯಕತ್ವವು 2001ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಲ್ಲಾ ಉಮರ್‍ಗೆ ಆಶ್ರಯ ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ.
ಹೀಗೆಂದು ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರಿಗೆ ಬಂದ ಇಮೇಲ್‍ವೊಂದು ತಿಳಿಸಿದೆ. ಈವರೆಗೆ ಪಾಕಿಸ್ತಾನವು ಐಎಸ್‍ಐ ಮತ್ತು ಉಮರ್ ನಡುವೆ ಯಾವುದೇ ಸಂಪರ್ಕವಿರಲಿಲ್ಲ ಎನ್ನುತ್ತಲೇ ಬಂದಿದೆ. ಅಮೆರಿಕವೂ ಸಾಕ್ಷ್ಯಗಳ ಕೊರತೆ ಹೇಳಿ ಪಾಕ್ ನ ಮಾತನ್ನು ನಂಬಿದೆ. ಆದರೆ, 2 ವರ್ಷಗಳ ಹಿಂದೆ ಉಮರ್ ಸತ್ತಿದ್ದು ಕರಾಚಿಯ ಆಸ್ಪತ್ರೆಯಲ್ಲಿ. 2010ರ ಆ.25 ರಂದು ಹಿಲರಿಗೆ ಬಂದ ಇಮೇಲ್, ಉಮರ್‍ಗೆ ಐಎಸ್‍ಐ ಕ್ವೆಟ್ಟಾದಲ್ಲಿ ಆಶ್ರಯ ನೀಡಿದ್ದು, ಪಶ್ತುನಾ ಬಾದ್‍ನಲ್ಲಿ ಸಹಚರರಿಗೆ ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿತ್ತು.
Advertisement