
ಸನಾ(ಯೆಮನ್): ಹೌಥಿ ಬಂಡುಕೋರರ ವಶದಲ್ಲಿರುವ ಮಸೀದಿಯನ್ನು ಗುರಿಯಾಗಿರಿಸಿ ಉಗ್ರರು ನಡೆಸಿದ ಎರಡು ಆತ್ಮಹತ್ಯೆ ಬಾಂಬ್ ದಾಳಿಗೆ 30 ಜನ ಬಲಿಯಾಗಿದ್ದು, 100 ಜನ ಗಾಯಗೊಂಡಿರುವ ಘಟನೆ ಯೆಮನ್ ರಾಜಧಾನಿ ಸನಾದಲ್ಲಿ ನಡೆದಿದೆ.
ಕಳೆದ ಸಂಜೆ ಆಲ್ ಜೈರ್ಫ್ ಜಿಲ್ಲೆಯ ಮಸೀದಿಯಲ್ಲಿ ಸಂಜೆ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಆತ್ಮಹತ್ಯೆ ಬಾಂಬ್ ದಾಳಿ ನಡೆಸಿದ್ದಾರೆ. ಬಾಂಬಾ ದಾಳಿಯಲ್ಲಿ 30 ಜನ ಸಾವಿಗೀಡಾಗಿದ್ದು, 100 ಜನ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯ ಗುರುವಾರ ತಿಳಿಸಿದೆ.
ಮೊದಲನೇ ಬಾಂಬ್ ಸ್ಫೋಟಗೊಂಡ ಬಳಿಕ ಜನರು ಗಾಯಾಳುಗಳಿಗೆ ನೆರವು ನೀಡುತ್ತಿದ್ದಾಗ ಮತ್ತೊಂದು ಬಾಂಬ್ ಸಮೀಪದ ವಾಹನವೊಂದರಲ್ಲಿ ಸ್ಫೋಟಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಸೀದಿಯ ಒಳಗೆ ಆತ್ಮಹತ್ಯೆ ಬಾಂಬ್ ಸ್ಫೋಟಗೊಂಡ 20 ನಿಮಿಷದ ಬಳಿಕ ಹೊರಗೆ ಮತ್ತೊಂದು ಕಾರ್ ಬಾಂಬ್ ಸ್ಫೋಟಗೊಂಡಿತು. ಈ ವೇಳೆ ಹಲವರು ಸಾವಿಗೀಡಾಗಿ 12ಕ್ಕೂ ಹೆಚ್ಚು ಜನ ಗಾಯಗೊಂಡರು ಎಂದು ಪ್ರತ್ಯಕ್ಷ್ಯದರ್ಶಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಆತ್ಮಹತ್ಯೆ ಬಾಂಬ್ ದಾಳಿ ಹೊಣೆಹೊತ್ತ ಇಸಿಸ್
ಸನಾದ ಆಲ್ ಜೈರ್ಫ್ ಜಿಲ್ಲೆಯ ಮಸೀದಿ ಬಳಿ ಎರಡು ಆತ್ಮಹತ್ಯೆ ಬಾಂಬ್ ದಾಳಿ ನಡೆಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿದೆ.
Advertisement