
ವಾಷಿಂಗ್ಟನ್: ವಿಮಾನದಲ್ಲಿ ಪ್ರಯಾಣಿಕರಿಗೆ ಮದ್ಯ ವಿತರಣೆ ಮಾಡಲ್ಲ ಎಂದು ಹೇಳಿದ ಫ್ಲೈಟ್ ಅಟೆಂಡೆಂಟ್‍ವೊಬ್ಬಳನ್ನು ಎಕ್ಸ್‍ಪ್ರೆಸ್ ಜೆಟ್ ಸಂಸ್ಥೆ ವಜಾ ಮಾಡಿದೆ.
ಇಸ್ಲಾಂ ಧರ್ಮದಲ್ಲಿ ಮದ್ಯ ವಿತರಣೆಗೆ ಅವಕಾಶವಿಲ್ಲ. ಹಾಗಾಗಿ ನಾನು ಆ ಕೆಲಸ ಮಾಡಲ್ಲ ಎಂದು ಮುಸ್ಲಿಂ ಫ್ಲೈಟ್ ಅಟೆಂಡೆಂಟ್ ಚಾರಿ ಸ್ಟ್ಯಾನ್ಲೆ ಪಟ್ಟು ಹಿಡಿದಿದ್ದಳು. ಈ ಹಿನ್ನೆಲೆಯಲ್ಲಿ ಸಂಸ್ಥೆ ಆಕೆಯನ್ನು ಕೆಲಸದಿಂದ ಕಿತ್ತುಹಾಕಿದೆ.
ಇದನ್ನು ಪ್ರಶ್ನಿಸಿ ಚಾರಿ ಸಮಾನ ಉದ್ಯೋಗಾವ ಕಾಶ ಆಯೋಗಕ್ಕೆ ದೂರು ನೀಡಿದ್ದಾಳೆ. 2 ವರ್ಷಗಳ ಹಿಂದೆ ಚಾರಿ ಇಸ್ಲಾಂಗೆ ಮತಾಂತರಗೊಂಡಿದ್ದು, ಇಸ್ಲಾಂನಲ್ಲಿ ಮದ್ಯಕ್ಕೆ ನಿಷೇಧವಿದೆ ಎಂದು ಅರಿತ ಆಕೆ, ಯಾರಾದರೂ ಮದ್ಯ ಕೇಳಿದರೆ ವಿತರಿಸುವ ಕೆಲಸವನ್ನು ಬೇರೊಬ್ಬರಿಗೆ ಕಲ್ಪಿಸಿ ಎಂದು ಮೇಲ್ವಿಚಾರಕರನ್ನು ಕೇಳಿಕೊಂಡಿದ್ದಳು.
Advertisement