
ಲಂಡನ್: ಮುಸ್ಲಿಮರ ವಿರುದ್ಧದ ದ್ವೇಷದ ಹಿಂಸೆ ಲಂಡನ್ನಿನಲ್ಲಿ ೭೦% ಹೆಚ್ಚಳ ಕಂಡಿದೆ ಎಂದು ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.
ಮೊಟ್ರೊಪಾಲಿಟನ್ ಪೊಲೀಸ್ ಸೇವೆ ಬಿಡುಗಡೆ ಮಾಡಿರುವ ಅಂಕೆಗಳ ಪ್ರಕಾರ ಕಳೆದ ೧೨ ತಿಂಗಳುಗಳಲ್ಲಿ ಇಸ್ಲಾಂ ವಿರುದ್ಧದ ಭಯ-ದ್ವೇಷದಿಂದ ಹುಟ್ಟಿರುವ ಅಪರಾಧ ಪ್ರಕರಣಗಳ ಸಂಖ್ಯೆ ೮೧೬. ಅದರ ಹಿಂದಿನ ೧೨ ತಿಂಗಳುಗಳಲ್ಲಿ ಈ ಸಂಖ್ಯೆ ೪೭೮ ಇತ್ತೆಂದು ಬಿಬಿಸಿ ವರದಿ ಮಾಡಿದೆ.
ಇವುಗಳಲ್ಲಿ ಮಹಿಳೆಯರ ಮೇಲೆ ನಡೆಸಿದ ದಾಳಿಗಳೇ ಹೆಚ್ಚೆಂದು ಇಸ್ಲಾಂ ದ್ವೇಷಿ ದಾಳಿಗಳನ್ನು ವರದಿ ಮಾಡುವ 'ಟೆಲ್ ಎಂಎಎಂಎ' ಸಂಸ್ಥೆ ತಿಳಿಸಿದೆ.
"ಬೀದಿಗಳಲ್ಲಿ ಸುತ್ತಾಡುವ ಮುಸ್ಲಿಂ ಮಹಿಳೆಯರು, ಹಿಜಾಬ್ ಮತ್ತು ತಲೆ ಮೇಲೆ ಬಟ್ಟೆ ಕಟ್ಟುವ ಮಹಿಳೆಯರು ಈ ದಾಳಿಗೆ ಹೆಚ್ಚು ತುತ್ತಾಗಿರುವುದು ನಮ್ಮ ಗಮನಕ್ಕೆ ಬಂದಿದೆ" ಎಂದು ಸಂಸ್ಥೆ ತಿಳಿಸಿದೆ.
Advertisement