ಬ್ಯಾಂಕಾಕ್ ಬಾಂಬ್ ಸ್ಫೋಟ: ಇಬ್ಬರು ಭಾರತೀಯರ ಬಂಧನ

ಬ್ಯಾಂಕಾಕ್ ನ ಎರ್ವಾನ ದೇಗುಲದ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇಬ್ಬರು ಭಾರತೀಯರನ್ನು ಥಾಯ್ಲೆಂಡ್ ಪೊಲೀಸರು ಬಂಧಿಸಿದ್ದಾರೆ.
ಬಾಂಬ್ ಸ್ಪೋಟದ ಬಳಿಕ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)
ಬಾಂಬ್ ಸ್ಪೋಟದ ಬಳಿಕ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)

ಬ್ಯಾಂಕಾಕ್: ಬ್ಯಾಂಕಾಕ್ ನ ಎರ್ವಾನ ದೇಗುಲದ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇಬ್ಬರು ಭಾರತೀಯರನ್ನು ಥಾಯ್ಲೆಂಡ್ ಪೊಲೀಸರು ಬಂಧಿಸಿದ್ದಾರೆ.

ಶಂಕಿತ ವಿದೇಶಿ ವ್ಯಕ್ತಿಯೊಂದಿಗೆ  ಈ ಇಬ್ಬರು ಮಾತನಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಭಾರತೀಯರನ್ನು ವಿಚಾರಣೆಗಾಗಿ ಸೇನಾ ಕ್ಯಾಂಪ್ ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಿಕ್ಕಂತೆ ಬಂಧಿತರ ಬಗ್ಗೆ ಯಾವುದೇ ವಿಷಯವನ್ನು ಹೊರ ಹಾಕಿಲ್ಲ. ವಿಚಾರಣೆಗಾಗಿ ಮಾತ್ರ ವಶಕ್ಕೆ ಪಡೆಯಲಾಗಿದೆಯೇ? ಅಥವಾ ಇಬ್ಬರನ್ನು ಬಂಧಿಸಲಾಗಿದೆಯೇ? ಎಂಬುದರ ಬಗ್ಗೆ ಕೂಡಾ ಸುಳಿವು ಸಿಕ್ಕಿಲ್ಲ.

ಥಾಯ್ಲೆಂಡಿನ ತನಿಖಾ ಸಂಸ್ಥೆ ಜೊತೆ ಭಾರತದ ಗುಪ್ತಚರ ಇಲಾಖೆ ನಿರಂತರ ಸಂಪರ್ಕದಲ್ಲಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಸೆಂಟ್ರಲ್ ಬ್ಯಾಂಕಾಕ್‌ನ ಎರ್ವಾನ್ ದೇಗುಲದ ಹೊರಗೆ ಆಗಸ್ಟ್ 17ರ ಸಂಜೆ ಭಾರಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com