
ಇಸ್ಲಾಮಾಬಾದ್: ಶವಾಲ್ ಕಣಿವೆಯಲ್ಲಿ ಮೂವರು ಉಗ್ರರು ಸತ್ತರು. ಅವರನ್ನು ಕೊಂದದ್ದು ಪಾಕ್ ಸೈನಿಕರಲ್ಲ. ಪಾಕಿಸ್ತಾನ ಅಭಿವೃದ್ಧಿಪಡಿಸಿದ ಮಿಸೈಲ್ ಹಾರಿಸಬಲ್ಲ ಡ್ರೋನ್.
ಬುರ್ರಾಕ್ ಹೆಸರಿನ ಈ ಡ್ರೋನ್ ಅನ್ನು ಸೋಮವಾರ ಪರೀಕ್ಷೆ ಮಾಡಲಾಯಿತು. ಆಫ್ಘಾನಿಸ್ತಾನದಿಂದ ಬರುವ ಉಗ್ರರ ಸಂಖ್ಯೆ ಹೆಚ್ಚುತ್ತಿದ್ದು, ಶವಾಲ್ ಕಣಿವೆಯಲ್ಲಿ ತೀವ್ರಗಾಮಿಗಳ ಚಟುವಟಿಕೆ ಹೆಚ್ಚಾಗಿತ್ತು. ಅಮೆರಿಕದ ಡ್ರೋನ್‍ಗಳು ಅಲ್ಲಲ್ಲಿ ಉಗ್ರರನ್ನು ಮಟ್ಟ ಹಾಕುವ ಕೆಲಸವನ್ನು ಮಾಡುತ್ತಿದ್ದವು. ಪಾಕಿಸ್ತಾನದಲ್ಲಿ ಆತಂಕ ಸೃಷ್ಟಿಸುತ್ತಲೇ ಇರುವ ಉಗ್ರವಾದಿಗಳ ಹಾಕಲೆಂದೇ ಪಾಕ್ ಸೇನೆ ಈ ಹೆಜ್ಜೆ ಇಟ್ಟಿದ್ದು, ತನ್ನ ಮೊದಲ ಪ್ರಯತ್ನದಲ್ಲಿ ಯಶ ಕಂಡಿರುವುದಾಗಿ ಹೇಳಿಕೊಂಡಿದೆ.
Advertisement