ಸ್ಪರ್ಧೆ ಬಗ್ಗೆ ಕುಟುಂಬದಿಂದ ನಿರ್ಧಾರವೆಂದ ಬೈಡೆನ್

ಅಮೆರಿಕ ಉಪಾಧ್ಯಕ್ಷ ಜೋ ಬೈಡೆನ್ ಅಧ್ಯಕ್ಷೀಯ ಚುನಾವಣೆ ಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವ ನಿರ್ಧಾರ ತೆಗೆದು ಕೊಂಡಿಲ್ಲವಂತೆ...
ಅಮೆರಿಕ ಉಪಾಧ್ಯಕ್ಷ ಜೋ ಬೈಡೆನ್ (ಸಂಗ್ರಹ ಚಿತ್ರ)
ಅಮೆರಿಕ ಉಪಾಧ್ಯಕ್ಷ ಜೋ ಬೈಡೆನ್ (ಸಂಗ್ರಹ ಚಿತ್ರ)

ವಾಷಿಂಗ್ ಟನ್: ಅಮೆರಿಕ ಉಪಾಧ್ಯಕ್ಷ ಜೋ ಬೈಡೆನ್ ಅಧ್ಯಕ್ಷೀಯ ಚುನಾವಣೆ ಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವ ನಿರ್ಧಾರ ತೆಗೆದು ಕೊಂಡಿಲ್ಲವಂತೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಕುಟುಂಬ ವರ್ಗದವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಕುಟುಂಬದವರು ಒಪ್ಪಿದರೆ ಕಣಕ್ಕೆ ಧುಮುಕುವುದು  ಖಂಡಿತ ಎಂದು ಬೈಡೆನ್ ತಿಳಿಸಿದ್ದಾರೆ. ಕಳೆದ ಮೇ ನಲ್ಲಿ ಬೈಡೆನ್ ಪುತ್ರ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು. ಇದಾದ ಬಳಿಕ ಕೆಲ ಕಾಲ ಕುಟುಂಬ ವಿಚಲಿತವಾಗಿತ್ತು.

ಆದರೆ ಅವರು ಈಗ ಸ್ಪರ್ಧೆಗೆ ಒಪ್ಪಿಗೆ ಕೊಟ್ಟರೆ, ಒಂದು ಕೈ ನೋಡ ಬಹುದು ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ. ಎಂಎನ್‍ಬಿಸಿ ನ್ಯೂಸ್ ಅತ್ಯಂತ ಜನಪ್ರಿಯ ರಾಣಿ ಎರಡನೇ ಎಲಿಜಬೆತ್ ಕ್ವೀನ್ ಎಲಿಜಬೆತ್ ಬ್ರಿಟನ್‍ನ ಮೋಸ್ಟ್ ಪಾಪ್ಯುಲರ್ ರಾಣಿ ಎಂದು ಅಲ್ಲಿನ ಜನ ಅಭಿಪ್ರಾಯಪಟ್ಟಿದ್ದಾರೆ. ಶೇ.27 ರಷ್ಟು ಮಂದಿ ರಾಣಿ ಬಗ್ಗೆ ತೀವ್ರ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ  ಸಂಡೇ ಟೈಮ್ಸ್ ನ್ಯೂಸ್ ಸಮೀಕ್ಷೆ ನಡೆಸಿತ್ತು. ಇದರನ್ವಯ ಬಹುತೇಕ ಮಂದಿ ರಾಣಿ ಕುರಿತಂತೆ ಖುಷಿ ವ್ಯಕ್ತಪಡಿಸಿದ್ದಾರಂತೆ.

89 ವರ್ಷದ ಎಲಿಜೆಬೆತ್ ಅವರು, ಬುಧವಾರಕ್ಕೆ ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಎಲಿಜೆಬೆತ್ ಅವರ ಅಜ್ಜಿ ವಿಕ್ಟೋರಿಯಾ ಅವರು 63 ವರ್ಷ 216 ದಿನ ಆಳ್ವಿಕೆ ನಡೆಸಿದ್ದರು. ಈ ಅವಧಿಯನ್ನು  ಇನ್ನೆರಡು ದಿನಗಳಲ್ಲಿ ಎಲಿಜೆಬೆತ್ ಪೂರೈಸಲಿದ್ದು, ಇವರೇ ಬ್ರಿಟನ್ ದೇಶವನ್ನು ಹೆಚ್ಚು ಕಾಲ ಆಳಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com