ನಿರಾಶ್ರಿತ ಪುರುಷರನ್ನು ಐ ಎಸ್ ವಿರುದ್ಧ ಹೋರಾಡಲು ಕಳುಹಿಸಿ: ನ್ಯೂಜೀಲ್ಯಾಂಡ್ ಸಚಿವ

ನ್ಯೂಜೀಲ್ಯಾಂಡ್ ಕೇವಲ ನಿರಾಶ್ರಿತ ಮಹಿಳೆಯರು ಹಾಗು ಮಕ್ಕಳಿಗೆ ಮಾತ್ರ ರಕ್ಷಣೆ ನಿಡಲಿದ್ದು ಪುರುಷರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ವಿರುದ್ಧ ಹೋರಾಟಕ್ಕೆ
ದೇಶ ತೊರೆದು ಬರುತ್ತಿರುವ ಸಿರಿಯನ್ ನಿರಾಶ್ರಿತರು (ಸಂಗ್ರಹ ಚಿತ್ರ)
ದೇಶ ತೊರೆದು ಬರುತ್ತಿರುವ ಸಿರಿಯನ್ ನಿರಾಶ್ರಿತರು (ಸಂಗ್ರಹ ಚಿತ್ರ)

ವೆಲ್ಲಿಂಗ್ಟನ್: ನ್ಯೂಜೀಲ್ಯಾಂಡ್ ಕೇವಲ ನಿರಾಶ್ರಿತ ಮಹಿಳೆಯರು ಹಾಗು ಮಕ್ಕಳಿಗೆ ಮಾತ್ರ ರಕ್ಷಣೆ ನಿಡಲಿದ್ದು ಪುರುಷರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ವಿರುದ್ಧ ಹೋರಾಟಕ್ಕೆ ಕಳುಹಿಸಲಿದೆ ಎಂದು ನ್ಯೂಜೀಲ್ಯಾಂಡಿನ ಹಿರಿಯ ಅಧಿಕಾರಿ ಹೇಳಿದ್ದಾರೆ.

ವಲಿಗರ ಸಂಖ್ಯೆ ಹೆಚ್ಚಿದರೆ ದೇಶ ಹೆಚ್ಚಿನ ನಿರಾಶ್ರಿತರನ್ನು ಒಪ್ಪಿಕೊಳ್ಳುತ್ತದೆ ಎಂದು ನ್ಯೂಜಿಲ್ಯಾಂಡೀನ ಮೊದಲ ಮುಖಂಡ ವಿನ್ಸ್ಂಟನ್ ಪೀಟರ್ಸ್ ತಿಳಿಸಿದ್ದಾರೆ ಎಂದು ರೇಡಿಯೋ ನ್ಯೂಜೀಲ್ಯಾಂಡ್ ತಿಳಿಸಿದೆ.

"ಅದನ್ನು ನಾವು ಮಾಡಿದರೆ, ಮಹಿಳೆಯರು ಮತ್ತು ಮಕ್ಕಳು ಬರಲಿ ಆದರೆ ಪುರುಷರಿಗೆ ತಮ್ಮ ದೇಶಕ್ಕೆ ಹೋಗಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಲು ಹೇಳಿ, ನಮ್ಮುಗಳಂತೆ" ಎಂದು ಅವರು ತಿಳಿಸಿದ್ದಾರೆ.

೪೦ ದಶಲಕ್ಷ ನ್ಯೂಜೀಲ್ಯಾಂಡ್ ಡಾಲರ್ಗಳ ವೆಚ್ಚದಲ್ಲಿ ಮುಂದಿನ ಎರಡುವರೆ ವರ್ಷಗಳಲ್ಲಿ ೬೦೦ ಹೆಚ್ಚುವರಿ ಸಿರಿಯನ್ ನಾಗರಿಕರಿಗೆ ಆಶ್ರಯ ನೀಡಲು ಸರ್ಕಾರ ಸಿದ್ಧವಿದೆ ಎಂದು ಸೋಮವಾರ ಅವರು ತಿಳಿಸಿದ್ದಾರೆ.

ದೇಶದ ವಲಸಿಗ ಸೇವೆಗಳನ್ನು ಈ ತುರ್ತು ಪರಿಸ್ಥಿಯಲ್ಲಿ ವಿಸ್ತರಿಸಲಿದ್ದೇವೆ ಎಂದು ಪ್ರಧಾನಿ ಜಾನ್ ಕೀ ತಿಳಿಸಿದ್ದಾರೆ.

ವಲಸಿಗರ ಆಶ್ರಯ ಸೇವೆಗಳಿಂದ ಹೆಚ್ಚುವರಿ ನಿರಾಶ್ರಿತರಿಗೆ ರಕ್ಷಣೆ ನಿಡಲು ಸಾಧ್ಯವಾಗಬಹುದು ಎಂದು ವಲಸೆ ಸಚಿವ ಮೈಕೆಲ್ ವುಡೌಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com