ಬ್ಯಾಂಕಾಕ್ ಬಾಂಬ್ ಸ್ಫೋಟ: ಬಂಧಿತ ಇಬ್ಬರು ಭಾರತೀಯರ ಬಿಡುಗಡೆ

ಬ್ಯಾಂಕಾಕ್ ನ ಎರ್ವಾನ ದೇಗುಲದ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಥಾಯಿ ಪೊಲೀಸರು ಬಂಧಿಸಿದ್ದ ಇಬ್ಬರು ಭಾರತೀಯರನ್ನು ಮಂಗಳವಾರ...
ಬಾಂಬ್ ಸ್ಪೋಟದ ಬಳಿಕ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)
ಬಾಂಬ್ ಸ್ಪೋಟದ ಬಳಿಕ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)
Updated on

ಬ್ಯಾಂಕಾಕ್: ಬ್ಯಾಂಕಾಕ್ ನ ಎರ್ವಾನ ದೇಗುಲದ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಥಾಯಿ ಪೊಲೀಸರು ಬಂಧಿಸಿದ್ದ ಇಬ್ಬರು ಭಾರತೀಯರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಬಂಧಿತ ಇಬ್ಬರು ಭಾರತೀಯರು ಉದ್ಯೋಗದ ಅನುಮತಿ ಹೊಂದಿದ್ದು, ಎಲ್ಲವೂ ಕಾನೂನಾತ್ಮಕವಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ವಿಚಾರಣೆ ವೇಳೆ ಬಂಧಿತ ಭಾರತೀಯರ ಹಿನ್ನೆಲೆಯನ್ನು ಪರಿಶೀಲಿಸಿದ್ದು, ಎಲ್ಲವೂ ಸರಿ ಇರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.

ಶಂಕಿತ ವಿದೇಶಿ ವ್ಯಕ್ತಿಯೊಂದಿಗೆ ಈ ಇಬ್ಬರು ಭಾರತೀಯರು ಮಾತನಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾದ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು.

ಸೆಂಟ್ರಲ್ ಬ್ಯಾಂಕಾಕ್‌ನ ಎರ್ವಾನ್ ದೇಗುಲದ ಹೊರಗೆ ಆಗಸ್ಟ್ 17ರ ಸಂಜೆ ಭಾರಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com