30 ಲಕ್ಷ ವರ್ಷ ಹಳೆಯ ಆದಿ ಮಾನವ ಅಸ್ತಿಪಂಜರ ಪತ್ತೆ

ದಕ್ಷಿಣ ಆಫ್ರಿಕಾದ ಅತ್ಯಂತ ಪುರಾತನ ಗುಹೆಯೊಂದರಲ್ಲಿ ಸುಮಾರು 30 ಲಕ್ಷ ವರ್ಷ ಹಳೆಯದ್ದೆಂದು ಹೇಳಲಾಗುವ...
ಪುರಾತನ ಗುಹೆಯಲ್ಲಿ ಪತ್ತೆಯಾದ ಅಸ್ತಿಪಂಜರ
ಪುರಾತನ ಗುಹೆಯಲ್ಲಿ ಪತ್ತೆಯಾದ ಅಸ್ತಿಪಂಜರ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಅತ್ಯಂತ ಪುರಾತನ ಗುಹೆಯೊಂದರಲ್ಲಿ ಸುಮಾರು 30 ಲಕ್ಷ ವರ್ಷ ಹಳೆಯದ್ದೆಂದು ಹೇಳಲಾಗುವ ಆದಿಮಾನವರನ್ನು ಹೋಲುವ ಅಸ್ತಿಪಂಜರವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಪತ್ತೆಯಾಗಿರುವ ಈ ಅಸ್ತಿಪಂಜರಗಳನ್ನು ಗಮನಿಸಿದರೆ, ಆಧುನಿಕ ಮನುಷ್ಯನ ಅತ್ಯಂತ ಸಮೀಪದ ಲಕ್ಷಣಗಳನ್ನು ಹೊಂದಿದೆ. ಆದರೆ, ಭುಜ ಹಾಗೂ ತಲೆಯ ಭಾಗ ವಾನರ ವರ್ಗ ಗಳನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಧುನಿಕ ಮನುಷ್ಯನ ಅತ್ಯಂತ ಹತ್ತಿರದ ಪೂರ್ವಿಕರು ಎಂದು ಭಾವಿಸಲಾಗಿರುವ ಈ ವರ್ಗವನ್ನು homo naledi ಎಂದು ವಿಜ್ಞಾನಿಗಳು ಹೆಸರಿಸಿದ್ದು, ಅಸ್ತಿಪಂಜರ ಮನುಷ್ಯನ ಪೂರ್ವಿಕರದ್ದು ಎಂದು ಖಚಿತವಾಗಿ ಒಪ್ಪಿಕೊಳ್ಳಲು ವಿಜ್ಞಾನಿಗಳು ನಿರಾಕರಿಸಿದ್ದಾರೆ.

ದಕ್ಷಿಣಾಫ್ರಿಕಾದ ರಾಜಧಾನಿ ಜೋಹಾನ್ಸ್ ಬರ್ಗ್ ನಿಂದ ಮೂವತ್ತು ಮೈಲಿ ದೂರದಲ್ಲಿರುವ ಗುಹೆಯಲ್ಲಿ ಈ ಅಸ್ತಪಂಜರಗಳಿ ಪತ್ತೆಯಾಗಿದ್ದು, ಪತ್ತೆಯಾದ ತಲೆಬುರುಡೆ ಹಾಗೂ ಕೈಕಾಲುಗಳ ಅಸ್ತಿಗಳನ್ನು ಜೋಡಿಸಿದಾಗ ಅದು 15 ವಿವಿಧ ವ್ಯಕ್ತಿಗಳೆಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com