
ನವದೆಹಲಿ: ಯೆಮನ್‍ನಲ್ಲಿ ಸೆ.8ರಂದು ಸೌದಿ ನೇತೃತ್ವದಲ್ಲಿ ಎರಡು ದೋಣಿಗಳ ಮೇಲೆ ನಡೆಸಲಾದ ವಾಯುದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಮುಸ್ತಾಫಾ ಹಾಗೂ ಅಸ್ಮರ್ ಎಂಬ ಎರಡು ದೋಣಿಗಳ ಮೇಲೆ ಸೌದಿ ನೇತೃತ್ವದ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ದೋಣಿಯಲ್ಲಿದ್ದ ಎಲ್ಲ 21 ಮಂದಿ ಭಾರತೀಯರೂ ಮೃತಪಟ್ಟಿದ್ದರು ಎಂದು ಮಾಧ್ಯಮ ವರದಿ ಹೇಳಿತ್ತು. ಆದರೆ, ದಾಳಿ ವೇಳೆ 7 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಆರೂ ಮಂದಿಯ ಶವ ಸೆ.10ರಂದು ಪತ್ತೆಯಾಗಿದೆ. ಈ ಕುರಿತು ಸಂಬಂಧಪಟ್ಟವರ ಕುಟುಂಬಕ್ಕೂ ಮಾಹಿತಿ ನೀಡಲಾಗಿದೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.
Advertisement