ಮೆಕ್ಕಾ ಕ್ರೇನ್ ದುರಂತಕ್ಕೆ"ಭಗವಂತನ ಅವಕೃಪೆ" ಕಾರಣ..!

ಸುಮಾರು 107 ಮಂದಿಯ ಸಾವಿಗೆ ಕಾರಣವಾದ ಮುಸ್ಲಿಂ ಧರ್ಮೀಯರ ಪವಿತ್ರ ಸ್ಥಳ ಮೆಕ್ಕಾ ಕ್ರೇನ್ ದುರಂತಕ್ಕೆ ಭಗವಂತನ ಅವಕೃಪೆಯೇ ಕಾರಣ ಎಂದು ಎಂಜಿನಿಯರ್ ಒಬ್ಬರು ಹೇಳಿದ್ದಾರೆ.
ಮೆಕ್ಕಾ ಕ್ರೇನ್ ದುರಂತ (ಸಂಗ್ರಹ ಚಿತ್ರ)
ಮೆಕ್ಕಾ ಕ್ರೇನ್ ದುರಂತ (ಸಂಗ್ರಹ ಚಿತ್ರ)

ಮೆಕ್ಕಾ: ಸುಮಾರು 107 ಮಂದಿಯ ಸಾವಿಗೆ ಕಾರಣವಾದ ಮುಸ್ಲಿಂ ಧರ್ಮೀಯರ ಪವಿತ್ರ ಸ್ಥಳ ಮೆಕ್ಕಾ ಕ್ರೇನ್ ದುರಂತಕ್ಕೆ ಭಗವಂತನ ಅವಕೃಪೆಯೇ ಕಾರಣ ಎಂದು ಎಂಜಿನಿಯರ್ ಒಬ್ಬರು  ಹೇಳಿದ್ದಾರೆ.

ಮೆಕ್ಕಾದಲ್ಲಿ ಶುಕ್ರವಾರ ನಡೆಯುತ್ತಿದ್ದ ಮಸೀದಿ ಕಟ್ಟಡ ಕಾಮಗಾರಿ ವೇಳೆ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಬೃಹತ್ ಕ್ರೇನ್ ಕುಸಿದು ಮಸೀದಿಯ ಮೇಲೆ ಬಿದ್ದ ಪರಿಣಾಮ ನೂರಾರು  ಸಾವು-ನೋವು ಸಂಭವಿಸಿತ್ತು. ಕ್ರೇನ್ ದುರಂತಕ್ಕೆ ಕ್ರೇನ್ ನಲ್ಲಿನ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗುತಿತ್ತು. ಅಲ್ಲದೆ ಮಸೀದಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸುದಿ ಬಿನ್ ಲಾಡೆನ್  ಸಂಸ್ಥೆಯ ವಿರುದ್ಧವೂ ಕೂಡ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ ಘಟನೆಗೆ ಸಂಬಂಧಿಸಿದಂತೆ ಸುದಿ ಬಿನ್ ಲಾಡೆನ್ ಸಂಸ್ಥೆಯ ಎಂಜಿನಿಯರ್ ಸ್ಪಷ್ಟನೆ ನೀಡಿದ್ದು, ದುರಂತಕ್ಕೆ ಭಗವಂತನ ಅವಕೃಪೆಯೇ ಕಾರಣ ಎಂದು ಹೇಳಿದ್ದಾರೆ. "ಮಸೀದಿ ಕಾಮಗಾರಿ  ನಡೆಸುತ್ತಿದ್ದ ಕ್ರೇನ್ ತಾಂತ್ರಿಕವಾಗಿ ಸದೃಢವಾಗಿಯೇ ಇತ್ತು. ಕಳೆದ 3-4 ವರ್ಷಗಳಿಂದ ಕ್ರೇನ್ ಯಾವುದೇ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸಿದೆ. ಹೀಗಾಗಿ ಕ್ರೇನ್ ನಲ್ಲಿ ಯಾವುದೇ ತಾಂತ್ರಿಕ  ತೊಂದರೆ ಇರಲಿಲ್ಲ. ಆದರೆ ಕಾಮಗಾರಿ ವೇಳೆ ಭಾರಿ ಗಾಳಿ ಮತ್ತು ಮಳೆ ಬಿದ್ದ ಕಾರಣ ಕ್ರೇನ್ ಮಗುಚಿಕೊಂಡಿದೆ. ಇದರಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಇದೊಂದು "ಆಕ್ಟ್ ಆಫ್  ಗಾಡ್" (ದೇವರ ಅವಕೃಪೆ)ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

ಮೆಕ್ಕಾದಂತಹ ಪವಿತ್ರ ಸ್ಥಳದಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇಂತಹ ಜನನಿಭಿಡ ಸ್ಥಳದಲ್ಲಿ ಬೃಹತ್ ಯಂತ್ರಗಳನ್ನು ಅಳವಡಿಸುವುದು ಮತ್ತು ಕಾಮಗಾರಿ ನಡೆಸುವುದು ನಿಜಕ್ಕೂ  ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com