ವೈಮಾನಿಕ ದಾಳಿಗೆ ಪಾಕಿಸ್ತಾನದಲ್ಲಿ ೨೮ ಉಗ್ರರ ಹತ್ಯೆ

ಉತ್ತರ ವಾಜಿರಿಸ್ಥಾನದಲ್ಲಿ ಪಾಕಿಸ್ತಾನ ರಕ್ಷಣಾ ಪಡೆ ನಡೆಸಿದ ವೈಮಾನಿಕ ದಾಳಿಗೆ ಖೈಬರ್ ಏಜೆನ್ಸಿಯ ವಿವಿಧ ಭಾಗಗಳಲ್ಲಿ ೨೮ ಉಗ್ರರನ್ನು ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಉತ್ತರ ವಾಜಿರಿಸ್ಥಾನದಲ್ಲಿ ಪಾಕಿಸ್ತಾನ ರಕ್ಷಣಾ ಪಡೆ ನಡೆಸಿದ ವೈಮಾನಿಕ ದಾಳಿಗೆ ಖೈಬರ್ ಏಜೆನ್ಸಿಯ ವಿವಿಧ ಭಾಗಗಳಲ್ಲಿ ೨೮ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಈ ವೈಮಾನಿಕ ದಾಳಿಯಲ್ಲಿ ಉಗ್ರರ ನಾಲ್ಕು ಅಡಗುತಾಣಗಳನ್ನು ನಾಶ ಮಾಡಲಾಗಿದೆ ಎಂದು ದ ನೇಶನ್ ಪತ್ರಿಕೆ ಶನಿವಾರ ವರದಿ ಮಾಡಿದೆ.

ಶುಕ್ರವಾರ ರಾತ್ರಿ ಮತ್ತು ಶನಿವಾರದೊಳಗೆ ಖೈಬರ್ ಏಜೆನ್ಸಿ ಮತ್ತು ಉತ್ತರ ವಾಜಿರಿಸ್ಥಾನದಲ್ಲಿ ಶಂಕಿತ ಉಗ್ರರ ಮೇಲೆ ಫೈಟರ್ ಜೆಟ್ ಗಳು ದಾಳಿ ಮಾಡಿದ್ದವು.

ಕನಿಷ್ಟ ೨೮ ಉಗ್ರರನ್ನು ಕೊಲ್ಲಲಾಗಿದೆ ಹಲವಾರು ಉಗ್ರರು ಗಾಯಗೊಂಡಿದ್ದಾರೆ ಮತ್ತು ನಾಲ್ಕು ಅಡಗುತಾಣಗಳನ್ನು ನಾಶಪಡಿಸಲಾಗಿದೆ. ತೆಹರಿಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಪಿಪಿ)ಯ ಪ್ರಮುಖ ಕಮ್ಯಾಂಡರ್ ಒಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಗೈದವರೆಲ್ಲಾ ನಿಷೇಧಿತ ಟಿಪಿಪಿ ಸಂಘಟನೆಗೆ ಸೇರಿದ್ದವರು ಎಂದು ಭದ್ರಾತ ಪಡೆಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ೪೫ ಶಂಕಿತ ಉಗ್ರರನ್ನು ಕೊಲ್ಲಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com