ವೆಂಬ್ಲೆ ಸ್ಟೇಡಿಯಂ ತುಂಬಿಸುವ ಸಾಮರ್ಥ್ಯ ಕೆಲವು ನಾಯಕರಿಗೆ ಮಾತ್ರ ಇದೆ: ಕ್ಯಾಮರೂನ್

ವೆಂಬ್ಲೆ ಸ್ಟೇಡಿಯಂನಲ್ಲಿ ಜನರನ್ನು ತುಂಬಿಸುವ ಸಾಮರ್ಥ್ಯ ಎಲ್ಲರಿಗೂ ಇರುವಂಥಹದ್ದಲ್ಲ, ಇಂತಹ ಸಾಮರ್ಥ್ಯ ಕೆಲವು ಪ್ರತಿಷ್ಟಿತ ವ್ಯಕ್ತಿಗಳಿಗೆ ಮಾತ್ರವೇ ಇರುತ್ತದೆ ಎಂದು...
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ (ಸಂಗ್ರಹ ಚಿತ್ರ)
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ವೆಂಬ್ಲೆ ಸ್ಟೇಡಿಯಂನಲ್ಲಿ ಜನರನ್ನು ತುಂಬಿಸುವ ಸಾಮರ್ಥ್ಯ ಎಲ್ಲರಿಗೂ ಇರುವಂಥಹದ್ದಲ್ಲ, ಇಂತಹ ಸಾಮರ್ಥ್ಯ ಕೆಲವು ಪ್ರತಿಷ್ಟಿತ ವ್ಯಕ್ತಿಗಳಿಗೆ ಮಾತ್ರ ಇರುತ್ತದೆ ಎಂದು ಹೇಳುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಭೇಟಿಯಾದ ಕ್ಯಾಮರೂನ್ ಮತ್ತು ಪ್ರಧಾನಮಂತ್ರಿ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಇನ್ನಿತರೆ ಭದ್ರತಾ ವ್ಯವಸ್ಥೆ ಕುರಿತಂತೆ ಚರ್ಚೆ ನಡೆಸಿದರು. ನಂತರ ಮಾತನಾಡಿರುವ ಕ್ಯಾಮರೂನ್ ಅವರು ಮೋದಿ ಅವರನ್ನು ಪ್ರಶಂಸಿದ್ದು, ಮೋದಿಯವರ ಬ್ರಿಟನ್ ಭೇಟಿಯನ್ನು ತಾನು ಎದುರು ನೋಡುತ್ತಿದ್ದು, ಸಮಾರಂಭದ ಕುರಿತಂತೆ ಸಾಕಷ್ಟು ಕುತೂಹಲಭರಿತನಾಗಿದ್ದೇನೆ. ವಿಂಬ್ಲೇ ಸ್ಟೇಡಿಯಂನಲ್ಲಿ ಜನರನ್ನು ಸೇರಿಸುವ ಸಾಮರ್ಥ್ಯ ಕೇವಲ ಕೆಲವು ಪ್ರತಿಷ್ಟಿತ ವ್ಯಕ್ತಿಗಳಿಗಷ್ಟೇ ಇದೆ ಎಂದು ಹೇಳಿದ್ದಾರೆ.

ನವೆಂಬರ್ ತಿಂಗಳಲ್ಲಿ ಮೋದಿ ಯುಕೆಗೆ ಭೇಟಿ ನೀಡಲಿದ್ದು, ಅಲ್ಲಿ ಪ್ರತಿಷ್ಟಿತ ವೆಂಬ್ಲೆ ಸ್ಟೇಡಿಯಂ ನಲ್ಲಿ ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com