ತ್ರಿವರ್ಣದ ಪ್ರೊಫೈಲ್ ಪಿಕ್ಚರ್ ಟೂಲ್: ಊಹಾಪೋಹಗಳಿಗೆ ತೆರೆ ಎಳೆದ ಫೇಸ್ ಬುಕ್

ಡಿಜಿಟಲ್ ಇಂಡಿಯಾಗೆ ಬೆಂಬಲವೆಂಬಂತೆ ಫೇಸ್ ಬುಕ್ 2ದಿನಗಳ ಹಿಂದೆ ಪರಿಚಯಿಸಿದ್ದ ತ್ರಿವರ್ಣದ ಪ್ರೊಫೈಲ್ ಪಿಕ್ಚರ್ ಟೂಲ್ ಬಗ್ಗೆ ಹಬ್ಬಿದ್ದ...
ಪ್ರಧಾನಿ ನರೇಂದ್ರ ಮೋದಿ-ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝಕರ್ ಬರ್ಗ್
ಪ್ರಧಾನಿ ನರೇಂದ್ರ ಮೋದಿ-ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝಕರ್ ಬರ್ಗ್

ಕ್ಯಾಲಿಫೋರ್ನಿಯಾ: ಡಿಜಿಟಲ್ ಇಂಡಿಯಾಗೆ ಬೆಂಬಲವೆಂಬಂತೆ ಫೇಸ್ ಬುಕ್ 2ದಿನಗಳ ಹಿಂದೆ ಪರಿಚಯಿಸಿದ್ದ ತ್ರಿವರ್ಣದ ಪ್ರೊಫೈಲ್ ಪಿಕ್ಚರ್ ಟೂಲ್ ಬಗ್ಗೆ ಹಬ್ಬಿದ್ದ ಊಹಾಪೋಹಗಳನ್ನು ಫೇಸ್‍ಬುಕ್ ತಳ್ಳಿಹಾಕಿದೆ.

ಈ ಪಿಕ್ಚರ್ ಟೂಲ್ ಮೂಲಕ ಭಾರತ ಇಷ್ಟು ದಿನ ವಿರೋಧಿಸುತ್ತಿದ್ದ ಇಂಟರ್ ನೆಟ್.ಆರ್ಗ್ ಎಂಬ ವಿವಾದಿತ ಯೋಜನೆಯನ್ನು ಹಿಂಬಾಗಿಲಿನ ಮೂಲಕ ಒಳ ತರುತ್ತಿದೆ ಎಂಬ ವದಂತಿ ಹಬ್ಬಿತ್ತು. ಝಕರ್ ಬರ್ಗ್ fb. com/supportdigitalindia ಎಂಬ ಕೊಂಡಿ ಉಪಯೋಗಿಸಿ ಪ್ರೊಫೈಲ್ ಪಿಕ್ಚರ್ ಮಾಡಿದ್ದರು.

ಇದನ್ನು ಮೋದಿ ಅನುಕರಿಸಿ ಭಾರತೀಯರಿಗೂ ಲಿಂಕ್ ಬಳಸಿ ಚಿತ್ರ ಬದಲಿಸಿಕೊಳ್ಳಲು ವಿನಂತಿಸಿದ್ದರು. ಆದರೆ ಕೆಲವು ವರದಿಗಳು ಈ ಕೊಂಡಿಯ ಸೋರ್ಸ್ ಕೋಡ್ ಬಿಡಿಸಿಟ್ಟು ಇಂಟರ್ ನೆಟ್ಟ ಡಾಟ್ ಆರ್ಗ್ ಕದ್ದುಮುಚ್ಚಿ ಜಾರಿಗೆ ಬರಲಿದೆ ಎಂಬ ಆತಂಕ ಹರಡಿದ್ದರು.

ಇಂಟರ್‍ನೆಟ್ ಡಾಟ್ ಆರ್ಗ್ ಎಂಬುದು ಫ್ರೀ ಬೆಸಿಕ್ಸ್ ಆ್ಯಪ್ ಆಗಿದ್ದು, ಇದು ಮುಕ್ತ ಅಂತರ್ಜಾಲ ವ್ಯವಸ್ಥೆಯ ವಿರೋಧಿಯಾಗಿದೆ. ಇದಕ್ಕೂ ಡಿಜಿಟಲ್ ಇಂಡಿಯಾ ಪ್ರೊಫೈಲ್ ಪಿಕ್ಚರ್‍ಗೂ ಸಂಬಂಧವಿಲ್ಲ. ಅದು ಇಂಜಿನಿಯರ್ ನಿಂದ ಕೋಡ್ ಬರೆಯುವಾಗ ಆದ ಪ್ರಮಾದ. ಕೋಡ್ ಬದಲಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್‍ಬುಕ್ ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com