ಅಮೆರಿಕಾ ವಾಯುದಾಳಿಗೆ ಆಪ್ಘಾನಿಸ್ಥಾನದಲ್ಲಿ ೧೬ ತಾಲಿಬಾನಿ ಉಗ್ರರ ಹತ್ಯೆ

ತಾಲಿಬಾನ್ ಮುಖ್ಯಸ್ಥ ಮೌಲವಿ ಸಲಾಂ ಒಳಗೊಂಡಂತೆ ೧೬ ತಾಲಿಬಾನಿ ಉಗ್ರಗಾಮಿಗಳು ಅಪ್ಘಾನಿಸ್ಥಾನದ ಕುಂದಜ್ ಪ್ರಾಂತ್ಯದಲ್ಲಿ ಅಮೆರಿಕಾದ ವಾಯುದಾಳಿಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬುಲ್: ತಾಲಿಬಾನ್ ಮುಖ್ಯಸ್ಥ ಮೌಲವಿ ಸಲಾಂ ಒಳಗೊಂಡಂತೆ ೧೬ ತಾಲಿಬಾನಿ ಉಗ್ರಗಾಮಿಗಳು ಅಪ್ಘಾನಿಸ್ಥಾನದ ಕುಂದಜ್ ಪ್ರಾಂತ್ಯದಲ್ಲಿ ಅಮೆರಿಕಾದ ವಾಯುದಾಳಿಗೆ ಹತ್ಯೆಯಾಗಿದ್ದಾರೆ ಎಂದು ಬೇಹುಗಾರಿಕಾ ಏಜೆನ್ಸಿ ಬುಧವಾರ ಹೇಳಿದೆ.

"ಕುಂದಜ್ ನಗರದಲ್ಲಿ ದಾಳಿ ನಡೆಸುತ್ತಿದ್ದ ತಾಲಿಬಾನಿನ ಮುಖ್ಯಸ್ಥ ಮೌಲವಿ ಸಲಾಂ ಒಳಗೊಂಡಂತೆ ವಾಯುದಾಳಿಗೆ ೧೬ ಉಗ್ರಗಾಮಿಗಳು ಹತ್ಯೆಯಾಗಿದ್ದಾರೆ" ಎಂದು ರಾಷ್ಟ್ರೀಯ ಭದ್ರತಾ ಡೈರೆಕ್ಟರೆಟ್(ಎನ್ ಡಿ ಎಸ್) ಹೇಳಿಕೆ ನೀಡಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಎನ್ ಡಿ ಎಸ್ ಜೊತೆಗೂಡಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದರೂ ದಾಳಿಯ ಸಮಯವನ್ನು ತಿಳಿಸಲಾಗಿಲ್ಲ.

ಕಾಬುಲ್ ನಿಂದ ೨೫೦ ಕಿಮೀ ದೂರದಲ್ಲಿರುವ ಕುಂದಜ್ ನಗರವನ್ನು ತಾಲಿಬಾನ್ ಸಂಪೂರ್ಣ ವಶಪಡಿಸಿಕೊಂಡ ನಂತರ ಈ ದಾಳಿ ನಡೆದಿದೆ.

ಮಂಗಳವಾರ ಆಫ್ಘನ್ ಪಡೆಗಳು ನಗರನ್ನು ಮತ್ತೆ ವಶಪಡಿಸಿಕೊಳ್ಳಲು ಸಿದ್ಧಪಡಿಸಿಕೊಳ್ಳುತ್ತಿದ್ದಾಗ, ತಾಲಿಬಾನಿನ ಪ್ರಮುಖ ಅಡ್ಡೆಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದೆ.

ಜನವರಿ ೧ರಿಂದ ಆಪ್ಘಾನಿಸ್ಥಾನದ ಭದ್ರತಾ ಪಡೆ ನ್ಯಾಟೊ ಪಡೆಗಳಿಂದ ಸಂಪೂರ್ಣವಾಗಿ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ ತಾಲಿಬಾನ್ ಪಡೆಗಳು ಕಳೆದ ಎರಡು ತಿಂಗಳಿನಿಂದ ದಾಳಿಯನ್ನು ತೀವ್ರಗೊಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com