ಬ್ರಸೆಲ್ಸ್ ಸ್ಫೋಟ: ಸಂಚಾರಕ್ಕೆ ಮುಕ್ತವಾದ ಝಾವೆಂಟಮ್ ವಿಮಾನ ನಿಲ್ದಾಣ

ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಿಂದಾಗ ಜಖಂಗೊಂಡು ಸ್ಥಗಿತಗೊಂಡಿದ್ದ ಝಾವೆಂಟಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರದಿಂದ ಸಂಚಾರಕ್ಕೆ ಮುಕ್ತವಾಗಲಿದೆ.
ಝಾವೆಂಟಮ್ ವಿಮಾನ ನಿಲ್ದಾಣ (ಸಂಗ್ರಹಚಿತ್ರ)
ಝಾವೆಂಟಮ್ ವಿಮಾನ ನಿಲ್ದಾಣ (ಸಂಗ್ರಹಚಿತ್ರ)

ಬ್ರಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಿಂದಾಗ ಜಖಂಗೊಂಡು ಸ್ಥಗಿತಗೊಂಡಿದ್ದ ಝಾವೆಂಟಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಭಾನುವಾರದಿಂದ ಸಂಚಾರಕ್ಕೆ ಮುಕ್ತವಾಗಲಿದೆ.

ಕಳೆದ ಮಾರ್ಚ್ 22ರಂದು ರಾಜಧಾನಿ ಬ್ರಸೆಲ್ಸ್ ನ ಮೂರು ಜನನಿಭಿಡ ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು ಓರ್ವ ಭಾರತೀಯ ಸೇರಿ 34 ಮಂದಿ ಸಾವನ್ನಪ್ಪಿದ್ದರು. ವಿಮಾನ  ನಿಲ್ದಾಣದಲ್ಲಿ 2 ಕಡೆ ಬಾಂಬ್ ಸ್ಫೋಟಗೊಂಡಿದ್ದರೆ, ಇದೇ ಬ್ರಸೆಲ್ಸ್ ಮೆಟ್ರೋ ನಿಲ್ದಾಣದಲ್ಲಿ ಬಳಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಅಲ್ಲದೆ ಒಂದು ಸಜೀವ್ ಬಾಂಬ್ ಅನ್ನು ಭದ್ರತಾ  ಸಿಬ್ಬಂದಿಗಳು ನಿಷ್ಕ್ರಿಯ ಗೊಳಿಸಿದ್ದರು. ಇಸಿಸ್ ಉಗ್ರಗಾಮಿ ಸಂಘಟನೆ ದಾಳಿ ಹೊಣೆ ಹೊತ್ತಿತ್ತು. ಬಾಂಬ್ ಸ್ಫೋಟದ ಬಳಿಕ ಅಂದರೆ ಮಾರ್ಚ್ 12ರಿಂದಲೇ ಬ್ರಸೆಲ್ಸ್ ನ ಝಾವೆಂಟಮ್ ವಿಮಾನ  ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಸತತ 12 ದಿನಗಳ ಬಳಿಕ ಇಂದು ಝಾವೆಂಟಮ್ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಮುಕ್ತವಾಗಿದೆ. ಇಂದು ಬೆಳಗಿನಿಂದಲೇ ಝಾವೆಂಟಮ್ ವಿಮಾನ  ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಶುರುವಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಮುಂಜಾನೆ ಪೋರ್ಚುಗೀಸ್ ವಿಮಾನ ಫಾರೋಗೆ ಝಾವೆಂಟಮ್ ನಿಂದ ಪ್ರಯಾಣ ಬೆಳೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com