ಮಾರಿಷಸ್ ಸಮೀಪ ದ್ಪೀಪದಲ್ಲಿ ಶಂಕಿತ ಎಂಹೆಚ್ 370 ವಿಮಾನದ ಅವಶೇಷ ಪತ್ತೆ

ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್ 370 ವಿಮಾನದ ಅವಶೇಷಗಳು ಮಾರಿಷಸ್ ನ ಸಮೀಪದ ದ್ವೀಪವೊಂದರಲ್ಲಿ ಪತ್ತೆಯಾಗಿದೆ ಎಂದು ಹೇಳಾಗುತ್ತಿದೆ.
ನಾಪತ್ತೆಯಾದ ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್ 370 ವಿಮಾನ (ಸಂಗ್ರಹ ಚಿತ್ರ)
ನಾಪತ್ತೆಯಾದ ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್ 370 ವಿಮಾನ (ಸಂಗ್ರಹ ಚಿತ್ರ)

ಪೋರ್ಟ್ ಲೂಯಿಸ್: ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್ 370 ವಿಮಾನದ ಅವಶೇಷಗಳು ಮಾರಿಷಸ್ ನ ಸಮೀಪದ ದ್ವೀಪವೊಂದರಲ್ಲಿ  ಪತ್ತೆಯಾಗಿದೆ ಎಂದು ಹೇಳಾಗುತ್ತಿದೆ.

ಮಾರಿಷಸ್ ನ ಸಮೀಪವಿರುವ ದ್ವೀಪಕ್ಕೆ ಮಾರ್ಚ್ 30ರಂದು ದಂಪತಿಗಳು ವಿಹಾರಕ್ಕೆಂದು ತೆರಳಿದ್ದಾಗ ವಿಮಾನದ ಅವಶೇಷಗಳನ್ನು ಹೋಲುವ ಕೆಲ ವಸ್ತುಗಳು ಪತ್ತೆಯಾಗಿದ್ದವು. ಈ  ವಿಚಾರವನ್ನು ದಂಪತಿಗಳು ಕೂಡಲೇ ತಾವು ತಂಗಿದ್ದ ಹೊಟೆಲ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿರುವ  ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ದ್ವೀಪದಲ್ಲಿ ವಿಮಾನದ ಅವಶೇಷ ಪತ್ತೆಯಾದ ವಿಚಾರ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು 2014ರಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾದ ಎಂಎಚ್ 370 ವಿಮಾನದ  ಅವಶೇಷಗಳೇ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಎಂಎಚ್ 370 ವಿಮಾನದ ಭಾಗಗಳನ್ನು ಹೋಲುವಂತಹ ಅವಶೇಷಗಳು ಪತ್ತೆಯಾಗಿರುವುದು ಹಲವು  ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರಸ್ತುತ ಮಾರಿಷಸ್ ಸರ್ಕಾರ ಕೆಲ ಹಿರಿಯ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ರವಾನಿಸಿದ್ದು, ಅಧಿಕಾರಿಗಳಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಸುಮಾರು 12 ಸಿಬ್ಬಂದಿಗಳ ಸಹಿತ 227 ಮಂದಿಯನ್ನು ಹೊತ್ತಿದ್ದ ಎಂಎಚ್ 370 ಬೋಯಿಂಗ್ ವಿಮಾನ 2014 ಮಾರ್ಚ್ 8ರಂದು ಮಲೇಷ್ಯಾದಿಂದ ಚೀನಾ ರಾಜಧಾನಿ ಬೀಜಿಂಗ್ ಗೆ ಹಾರಿತ್ತು.  ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ವಾಯುಗೋಪುರದ ಸಂಪರ್ಕ ಕಡಿದುಕೊಂಡಿತ್ತು. ಮಲೇಷ್ಯಾ ಮತ್ತು ಇತರೆ ದೇಶಗಳ ಅತ್ಯಾಧುನಿಕ ರಾಡಾರ್ ಗಳು ನೀಡಿದ  ಮಾಹಿತಿಯನ್ವಯ ವಿಮಾನ ವಿಯೆಟ್ನಾಂ ಬಳಿ ದಕ್ಷಿಣ ಚೀನಾದ ಸಮುದ್ರದಲ್ಲಿ ಪತನವಾಗಿರಬಹುದು ಎಂದು ಶಂಕಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com