
ಹೇಗ್: ಫ್ರೆಂಚ್ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನ ಫ್ಲ್ಯಾಟ್ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು 45 ಕೆ.ಜಿಯುಳ್ಳ ಯುದ್ಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಫ್ರೆಂಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 27 ರಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆ ಮೇರೆಗೆ ಅನಿಸ್ ಬಹ್ರಿ,ರೆಡಾ ಕ್ರಿಕಿಟ್ ಹಾಗೂ ಮತ್ತೊಬ್ಬ ಶಂಕಿತನ್ನ್ನು ಪ್ಯಾರಿಸ್ ನಲ್ಲಿ ಬಂಧಿಸಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಡಚ್ ನಲ್ಲಿರುವ ಫ್ಲ್ಯಾಟ್ ವೊಂದರಲ್ಲಿ ಯುದ್ಧ ಸಾಮಾಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಲ್ಲಿನ ಅಧಿಕಾರಿಗಳು, ಫ್ಲ್ಯಾಟ್ ನಲ್ಲಿ ನಮಗೆ ಸುಮಾರು 45 ಕೆಜಿಯುಳ್ಳ ಯುದ್ಧ ಸಾಮಾಗ್ರಿಗಳು ದೊರಕಿದೆ. ಇದರೊಂದಿಗೆ ಸಾಕಷ್ಟು ವಿಭಿನ್ನತೆಯುಳ್ಳ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಸ್ಫೋಟಕ ವಸ್ತುಗಳಾವುದೂ ದೊರಕಿಲ್ಲ ಎಂದು ಹೇಳಿದ್ದಾರೆ.
Advertisement