ಆತ್ಮಾಹುತಿ ದಾಳಿಗೆ ಆಫ್ಘನ್ ನಲ್ಲಿ 6 ಸಾವು
ಕಾಬುಲ್: ಆಫ್ಘಾನಿಸ್ತಾನದ ಮತ್ತೆ ಉಗ್ರರ ದಾಳಿ ಮುಂದುವರೆದಿದ್ದು, ಮಂಗಳವಾರ ಬೆಳಗ್ಗೆ ಬೈಕ್ ನಲ್ಲಿ ಬಂದ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ 6 ಜನರನ್ನು ಕೊಂದು ಹಾಕಿದ್ದಾನೆ.
ಆಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದಲ್ಲಿ ಈ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವಿಗೀಡಾಗಿ ಸುಮಾರು 22ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಮಾಹಿತಿಯನ್ವಯ ಸೆಯಾಗರ್ಡ್ ಜಿಲ್ಲಾ ವ್ಯಾಪ್ತಿಯಲ್ಲಿನ ಶಾಲೆಯ ಬಳಿ ಆತ್ಮಾಹುತಿ ದಾಳಿ ಆಗಿದ್ದು, ಬೈಕ್ ನಲ್ಲಿ ಸ್ಪೋಟಕಗಳನ್ನು ಇಟ್ಟು ಸ್ಫೋಟಿಸಲಾಗಿದೆ ಎಂದು ಪೊಲೀಸರು ದೃಢ ಪಡಿಸಿದ್ದಾರೆ.
ಪ್ರಸ್ತುತ ಈ ದಾಳಿಯ ಜವಾಬ್ದಾರಿಯನ್ನು ಯಾವುದೇ ಉಗ್ರಸಂಘಟನೆ ಹೊತ್ತಿಲ್ಲವಾದರೂ, ಲಷ್ಕರ್ ಇ ತೊಯ್ಬಾ ಸಂಘಟನೆ ಮೇಲೆ ಭದ್ರತಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದಾಳಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ