ಪಾಕ್ ನಲ್ಲಿರುವ ಕ್ರೈಸ್ತರಿಗೆ ಭದ್ರತೆ ನೀಡಲು ಆಗ್ರಹಿಸಿ ವಿಶ್ವಸಂಸ್ಥೆ ಎದುರು ಪ್ರತಿಭಟನೆ

ಪಾಕಿಸ್ತಾನದಲ್ಲಿರುವ ಕ್ರೈಸ್ತ ಸಮುದಾಯದವರು ಹಾಗೂ ಅವರ ಬೆಂಬಲಿಗರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆಗೆ ಒತ್ತಾಯಿಸಿ ಯುಎನ್ ಕೆಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಯುಎನ್ ಕೆಂದ್ರ ಕಚೇರಿ (ಸಂಗ್ರಹ ಚಿತ್ರ)
ಯುಎನ್ ಕೆಂದ್ರ ಕಚೇರಿ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಪಾಕಿಸ್ತಾನದಲ್ಲಿರುವ ಕ್ರೈಸ್ತ ಸಮುದಾಯದವರು ಹಾಗೂ ಅವರ ಬೆಂಬಲಿಗರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆಗೆ ಒತ್ತಾಯಿಸಿ ಯುಎನ್ ಕೆಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.  
ಈಸ್ಟರ್ ಆಚರಣೆ ವೇಳೆ ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ಬಾಂಬ್ ಸ್ಪೋಟಿಸಿರುವ ಹಿನ್ನೆಲೆಯಲ್ಲಿ ಅಭದ್ರತೆ ವಾತಾವರಣವನ್ನು ಎದುರಿಸುತ್ತಿರುವ ಕ್ರೈಸ್ತ ಸಮುದಾಯದವರು ಪಾಕಿಸ್ತಾನದಲ್ಲಿರುವ ಕ್ರೈಸ್ತರು ಅಪಾಯದ ಭಯದಲ್ಲೇ ಪ್ರತಿ ನಿತ್ಯ ಜೀವನ ಸಾಗಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ಸರ್ಕಾರದ ಧರ್ಮನಿಂದನೆ ವಿರೋಧಿ ಕಾನೂನಿನ ಭಯ ಒಂದೆಡೆಯಾದರೆ ಮತ್ತೊಂದೆಡೆ ಭಯೋತ್ಪಾದಕರು ಹಾಗೂ ತೀವ್ರವಾದಿ ರಾಜಕಾರಣಿಗಳ ಭಯ ಕಾಡುತ್ತಿದೆ. ಕ್ರೈಸ್ತರು ಹಾಗೂ ಅವರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಈ ಹಿಂದೆಯೂ ಅನೇಕ ಸರಣಿ ದಾಳಿ ನಡೆದಿದ್ದು ಲಾಹೋರ್ ನಲ್ಲಿ ನಡೆದ ದಾಳಿ ಇತ್ತೀಚಿನದ್ದು ಎಂದು ಪ್ರತಿಭಟನಾ ನಿರತ ಕ್ರೈಸ್ತ ಸಮುದಾಯ ಅಳಲು ತೋಡಿಕೊಂಡಿದೆ.  
ಅಂತಾರಾಷ್ಟ್ರೀಯ ಸಮುದಾಯ ಕೇರ್ ಫೌಂಡೇಶನ್ ನ ಅಧ್ಯಕ್ಷರಾಗಿರುವ ಜಾವೇದ್, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಯುಎನ್ ಹಾಗೂ ಅಮೆರಿಕ ಪಾಕಿಸ್ತಾನದಲ್ಲಿರುವ ಕ್ರೈಸ್ತರ ಶೋಷಣೆ ಅಂತ್ಯಗೊಳಿಸುವ ಬಗ್ಗೆ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದಿಂದ ಥೈಲ್ಯಾಂಡ್ ಗೆ ತೆರಳಿ ಆಶ್ರಯ ಬಯಸಿರುವ 4 ,000 ಕ್ರೈಸ್ತರ ಪೈಕಿ 500 ಕ್ರೈಸ್ತರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ, ಈ ಪೈಕಿ 11 ಜನರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಜಾವೇದ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com