
ಜಿನಿವಾ: ವಿಶ್ವಾದ್ಯಂತ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಸಂತ್ರಸ್ತರಾಗಿರುವವರಲ್ಲಿ ಅತಿ ಹೆಚ್ಚು ಸಂತ್ರಸ್ತರು ಮುಸ್ಲಿಂ ಸಮುದಾಯದವರಾಗಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.
ಹಿಂಸಾತ್ಮಕ ಉಗ್ರಗಾಮಿತ್ವ ನಿರ್ಮೂಲನೆ ಬಗ್ಗೆ ಸ್ವಿಜರ್ಲ್ಯಾಂಡ್ ಸರ್ಕಾರ ಹಾಗೂ ವಿಶ್ವಸಂಸ್ಥೆ ಆಯೋಜಿಸಿದ್ದ ಜಿನಿವಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಬಾನ್-ಕಿ ಮೂನ್, ಉಗ್ರಗಾಮಿತ್ವವನ್ನು ಯಾವುದೇ ಧರ್ಮದೊಂದಿಗೆ, ರಾಷ್ಟ್ರೀಯತೆಯೊಂದಿಗೆ, ಜನಾಂಗೀಯ ಗುಂಪುಗಳೊಂದಿಗೆ ತಳುಕುಹಾಕುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನಾದ್ಯಂತ ನಡೆದಿರಿಉವ ಭಯೋತ್ಪಾದಕ ಕೃತ್ಯಗಳ ಸಂತ್ರಸ್ತರಾಗಿರುವವರಲ್ಲಿ ಅತಿ ಹೆಚ್ಚು ಸಂತ್ರಸ್ತರು ಮುಸ್ಲಿಂ ಸಮುದಾಯದವರಾಗಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು ಎಂದು ಬಾನ್ ಕಿ ಮೂನ್ ಕರೆ ನೀಡಿದ್ದಾರೆ.
ಭಯೋತ್ಪಾದನೆಯನ್ನು ನಿಗ್ರಹಿಸಲು ತಾವು ನೀಡಿರುವ ವರದಿ ಸ್ಪಷ್ಟ ಶಿಫಾರಸುಗಳನ್ನು ಹೊಂದಿದ್ದು ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಪಾಲುದಾರಿಕೆ ಅಗತ್ಯತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಬಾನ್-ಕಿ-ಮೂನ್ ತಿಳಿಸಿದ್ದಾರೆ. ಭಯೋತ್ಪಾದನೆ ವಿಶ್ವಸಂಸ್ಥೆಗೆ ನೇರ ಸವಾಲೆಸೆಯುತ್ತಿದ್ದು, ಮಾನವ ಹಕ್ಕುಗಳಿಗೆ ಮಾರಕವಾಗಿದೆ ಎಂದು ಬಾನ್-ಕಿ-ಮೂನ್ ಹೇಳಿದ್ದಾರೆ.
Advertisement