ಪಾಕಿಸ್ತಾನ
ಪಾಕಿಸ್ತಾನ

ಕೇರಳದ ದೇಗುಲದಲ್ಲಿ ಅಗ್ನಿ ದುರಂತಕ್ಕೆ ಸಂತಾಪ ಸೂಚಿಸಿದ ಪಾಕಿಸ್ತಾನ

ಕೇರಳದ ಮೂಕಾಂಬಿಕ ದೇಗುಲದಲ್ಲಿ ಅಗ್ನಿ ದುರಂತ ಸಂಭವಿಸಿರುವುದಕ್ಕೆ ಪಾಕಿಸ್ತಾನ ಸಂತಾಪ ಸೂಚಿಸಿದೆ.
Published on

ಇಸ್ಲಾಮಾಬಾದ್: ಕೇರಳದ ಮೂಕಾಂಬಿಕ ದೇಗುಲದಲ್ಲಿ ಅಗ್ನಿ ದುರಂತ ಸಂಭವಿಸಿರುವುದಕ್ಕೆ ಪಾಕಿಸ್ತಾನ ಸಂತಾಪ ಸೂಚಿಸಿದೆ.
ಅಗ್ನಿ ದುರಂತದಲ್ಲಿ ಮಾಡಿದವರಿಗೆ ಪಾಕಿಸ್ತಾನದ ಜನತೆ ಹಾಗೂ ಪಾಕಿಸ್ತಾನ ಸರ್ಕಾರ ಸಂತಾಪ ಸೂಚಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ಹೇಳಿದ್ದಾರೆ. ಅಗ್ನಿ ದುರಂತದ ಸಂತ್ರಸ್ತರ ಕುಟುಂಬದೆಡೆಗೆ  ಪಾಕಿಸ್ತಾನ ಸರ್ಕಾರದ ಸಹಾನುಭೂತಿ ಇರಲಿದೆ. ದುರಂತದಲ್ಲಿ ಗಾಯಗೊಂಡವರು ಶೀಘ್ರವೇ ಚೇತರಿಕೆ ಕಾಣಲಿ ಎಂದು ಪಾಕ್ ನ ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಕೇರಳದ ಮೂಕಾಂಬಿಕ ದೇವಾಲಯದಲ್ಲಿ ವಾರ್ಷಿಕೋತ್ಸವ ಆಚರಣೆ ವೇಳೆ ಪಟಾಕಿಗಳು ಆಕಾಶದಲ್ಲಿ ಹಾರುವ ಬದಲು ನೆಲದಲ್ಲೇ ಸಿಡಿದ ಪರಿಣಾಮ ಘಟನೆಯಲ್ಲಿ 109 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com