9/11ರ ಮಸೂದೆ ಅಂಗೀಕಾರವಾದರೆ ಅಮೆರಿಕದ ಆರ್ಥಿಕ ಕುಸಿತ: ಸೌದಿ ಅರೇಬಿಯಾ

ಅಮೆರಿಕದ ಅವಳಿ ಕಟ್ಟಡಗಳ ಮೇಲೆ 2001, ಸೆಪ್ಟೆಂಬರ್ 11ರಂದು ನಡೆದ ಉಗ್ರಗಾಮಿ ದಾಳಿಗೆ ಸೌದಿ ಅರೇಬಿಯಾ ಕಾರಣ...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ನ್ಯೂಯಾರ್ಕ್: ಅಮೆರಿಕದ ಅವಳಿ ಕಟ್ಟಡಗಳ ಮೇಲೆ 2001, ಸೆಪ್ಟೆಂಬರ್ 11ರಂದು ನಡೆದ ಉಗ್ರಗಾಮಿ ದಾಳಿಗೆ ಸೌದಿ ಅರೇಬಿಯಾ ಕಾರಣ ಎಂದು ಅಮೆರಿಕ ಕಾಂಗ್ರೆಸ್ ಮಸೂದೆ ಅನುಮೋದಿಸಿದರೆ 750 ಶತಕೋಟಿ ಡಾಲರ್ ಮೊತ್ತದ ಅಮೆರಿಕಾ ಸಂಪತ್ತನ್ನು ಮಾರಾಟ ಮಾಡುವುದಾಗಿ ಸೌದಿ ಅರೇಬಿಯಾ ಬರಾಕ್ ಒಬಾಮಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಮಸೂದೆಯ ಅಂಗೀಕಾರವನ್ನು ತಡೆಯಲು ಕಾಂಗ್ರೆಸ್ ಜೊತೆ ಒಬಾಮಾ ಸರ್ಕಾರ ಲಾಬಿ ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಶಾಸನವನ್ನು ಜಾರಿಗೆ ತಂದರೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ.

ಉಗ್ರಗಾಮಿ ದಾಳಿಯಲ್ಲಿ ಸೌದಿ ಅರೇಬಿಯಾದ ಪಾತ್ರವಿರುವುದರ ಬಗ್ಗೆ ಕಳೆದ ಭಾನುವಾರ ಸಿಬಿಎಸ್ ನ್ಯೂಸ್ ನಲ್ಲಿ ವರದಿಯಾಗಿತ್ತು. ಬರಾಕ್ ಒಬಾಮಾ ಊ ತಿಂಗಳಾಂತ್ಯಕ್ಕೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದು, ಅಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಕಳೆದ ತಿಂಗಳು ಸೌದಿಯ ವಿದೇಶಾಂಗ ಸಚಿವ ಅದೆಲ್ ಅಲ್ ಜುಬೈರ್ ಕಳೆದ ತಿಂಗಳು ವಾಷಿಂಗ್ಟನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮೆರಿಕಕ್ಕೆ ವೈಯಕ್ತಿಕವಾಗಿ ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com