ಈಕ್ವೆಡಾರ್ ನಲ್ಲಿ ಪ್ರಬಲ ಭೂಕಂಪಕ್ಕೆ 77 ಮಂದಿ ಬಲಿ; ಸುನಾಮಿ ಎಚ್ಚರಿಕೆ

ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ರಾಜಧಾನಿ ಕ್ವಿಟೋ ಕರಾವಳಿ ತೀರದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸುನಾಮಿ ಸಂಭವಿಸುವ ಕುರಿತು ಎಚ್ಚರಿಕೆ ರವಾನಿಸಿದೆ.
ಇಕ್ವೆಡಾರ್ ನಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ (ಚಿತ್ರಕೃಪೆ: ಟ್ವಿಟರ್)
ಇಕ್ವೆಡಾರ್ ನಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ (ಚಿತ್ರಕೃಪೆ: ಟ್ವಿಟರ್)

ಕ್ವಿಟೋ: ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ನಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, 77 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ರಾಜಧಾನಿ ಕ್ವಿಟೋ ಕರಾವಳಿ ತೀರದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು,  ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸುನಾಮಿ  ಸಂಭವಿಸುವ ಕುರಿತು ಎಚ್ಚರಿಕೆ ರವಾನಿಸಿದೆ. ರಾಜಧಾನಿ ಕ್ವಿಟೋದಿಂದ ಸುಮಾರು 173 ಕಿ.ಮೀ ಸಮೀಪದಲ್ಲೇ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇಕ್ವೆಡಾರ್ ಮತ್ತು ಕೊಲಂಬಿಯಾ  ಕರಾವಳಿ ತೀರ ಪ್ರದೇಶದಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಗಳಿವೆ ಎಂದು ಫೆಸಿಫಿಕ್ ಸುನಾಮಿ ಕೇಂದ್ರ ಎಚ್ಚರಿಕೆ ನೀಡಿದೆ.

ಇನ್ನು ಈಕ್ವೆಡಾರ್ ನಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನೂರಾರು ಬೃಹತ್ ಕಟ್ಟಡಗಳು ನೆಲಕ್ಕುರುಳಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಆತಂಕಕಾರಿ ಅಂಶವೆಂದರೆ ಇನ್ನು 24 ಗಂಟೆಯೊಳೆಗೆ ಮತ್ತೆ  ಪ್ರಬಲ ಸರಣಿ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com