ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಮಾನತನ್ನು ಹಿಂಪಡೆದು ಮತ್ತೆ ಅವರನ್ನು ಮರುನೇಮಕ ಮಾಡಿದ್ದಾರೆ. ಈ ವಿಷಯ ತಿಳಿದು ನನಗೆ ತುಂಬಾ ಬೇಸರವಾಯಿತು. ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಪಾದ್ರಿ ಸ್ಥಾನಕ್ಕೆ ಅರ್ಹನಲ್ಲ. ಆತನನ್ನು ನೇಮಕ ಮಾಡಿದರೆ, ಭಾರತದಲ್ಲಿರುವ ಅನೇಕ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ. ಹಾಗಾಗಿ, ಮರುನೇಮಕ ಮಾಡಿದ ಬಿಷಪ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಮೆರಿಕದ ಮಹಿಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.