ನ್ಯೂಯಾರ್ಕ್: ಖ್ಯಾತ ಪಾಪ್ ಸಿಂಗರ್ ಪ್ರಿನ್ಸ್ ರಾಗರ್ಸ್ ನೆಲ್ಸನ್(57) ಗುರುವಾರ ಅಮೆರಿಕದಲ್ಲಿ ನಿಧರಾಗಿದ್ದಾರೆ.
ಪಾರ್ ಸೂಪರ್ ಸಾಂಗ್ ಗೀತಿಗಳಿಂದಲೇ ಪ್ರಿನ್ಸ್ ಜಗತ್ಪ್ರಸಿದ್ಧಿಯಾಗಿದ್ದರು. ಅಮೆರಿಕರದಲ್ಲಿರುವ ಮಿನ್ಸಿಸೊಟಾದ ತಮ್ಮ ನಿವಾಸದಲ್ಲಿ ನಿನ್ನೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿನ್ಸ್ ರಾಗರ್ಸ್ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ರಾತ್ರಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದರು. ಪ್ರಿನ್ಸ್ ಸಾವನ್ನಪ್ಪಿದ ಸುದ್ದಿ ಕೇಳಿದ ಅಭಿಮಾನಿಗಳು ಕಚೇರಿಗೆ ದೌಡಾಯಿಸಿ ಶೋಕ ವ್ಯಕ್ತಪಡಿಸಿದ್ದಾರೆ.
1984ರಲ್ಲಿ ರಚಿತವಾಗಿರುವ ಪರ್ಪಲ್ ರೇನ್ ಆಲ್ಬಂ ಗೀತೆ ಎಲ್ಲ ಸಂದರ್ಭಕ್ಕೂ ಪ್ರಸ್ತುತವಾಗಿತ್ತು. 2004ರಲ್ಲಿ ರಾಕ್ ಅಂಡ್ ರೋಲ್ ಆಲ್ಪಮ್ ಗೀತೆ ಇವರಿಗೆ ಮ್ಯೂಸಿಕ್ ಖ್ಯಾತಿ ಜೊತೆಗೆ ಸಾಮಾಜಿಕ ಹೆಸರನ್ನು ತಂದುಕೊಟ್ಟಿತ್ತು.