ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಳ್ಳಸಾಗಾಣೆಯಾದ ಬುದ್ಧನ ಪ್ರತಿಮೆಯನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲಿರುವ ಅಮೆರಿಕಾ

ಪಾಕಿಸ್ತಾನದ ಸ್ವಾಟ್ ಕಣಿವೆಯಿಂದ ಅಮೆರಿಕಾಗೆ ಕಳ್ಳಸಾಗಾಣಿಕೆಯಾಗಿದ್ದ ವಿರಳ ಬುದ್ಧನ ಪ್ರತಿಮೆಯನ್ನು ಗುರುವಾರ ಹಿಂದಿರುಗಿಸಲಾಗುವುದು ಎಂದು ಪಾಕಿಸ್ತಾನ ಪತ್ರಿಕೆ

ಇಸ್ಲಾಮಾಬಾದ್:  ಪಾಕಿಸ್ತಾನದ ಸ್ವಾಟ್ ಕಣಿವೆಯಿಂದ ಅಮೆರಿಕಾಗೆ ಕಳ್ಳಸಾಗಾಣಿಕೆಯಾಗಿದ್ದ ವಿರಳ ಬುದ್ಧನ ಪ್ರತಿಮೆಯನ್ನು ಗುರುವಾರ ಹಿಂದಿರುಗಿಸಲಾಗುವುದು ಎಂದು ಪಾಕಿಸ್ತಾನ ಪತ್ರಿಕೆ ವರದಿ ಮಾಡಿದೆ.

ಅಂದಾಜಿನ ಪ್ರಕಾರ ೧೯೮೦ರಲ್ಲಿ ಕಳವಾದ ಈ ಅಪರೂಪದ ಪ್ರತಿಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧.೧ ಮಿಲಿಯನ್ ಡಾಲರ್ ಬೆಲೆ ಬಾಳುತ್ತದೆ.

ಈ ಕಳ್ಳಸಾಗಾಣಿಕೆ ಪ್ರತಿಮೆಯನ್ನು ಹಿಂದಿರುಗಿಸುವ ಕಾರ್ಯಕ್ರಮವನ್ನು ನ್ಯೂಯಾರ್ಕ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಡಾನ್ ಆನ್ಲೈನ್ ವರದಿ ಮಾಡಿದೆ.

ನ್ಯೂಯಾರ್ಕ್ ನ ಕಲಾ ಪ್ರದರ್ಶನದಲ್ಲಿ ಈ ಪ್ರತಿಮೆಯನ್ನು ಮಾರಾಟಕ್ಕೆ ಇಡಲಾಗಿತ್ತು.

X

Advertisement

X
Kannada Prabha
www.kannadaprabha.com