ಪರಮಾಣು ಉತ್ತರ ಕೊರಿಯಾವನ್ನು ಅಳಿಸಿ ಹಾಕಬಲ್ಲೆವು: ಒಬಾಮಾ ಎಚ್ಚರಿಕೆ

ಉತ್ತರ ಕೊರಿಯಾದ 'ಬೇಜವಬ್ದಾರಿ' ಮತ್ತು 'ಪ್ರಚೋದನಕಾರಿ' ನಾಯಕನಿಗೆ ಕಡಕ್ ಎಚ್ಚರಿಕೆ ನೀಡಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಮೇರಿಕಾದ ಪರಮಾಣು ಶಸ್ತ್ರಾಸ್ತ್ರಗಳು ನಿಮ್ಮ ದೇಶವನ್ನು
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
Updated on

ಉತ್ತರ ಕೊರಿಯಾದ 'ಬೇಜವಬ್ದಾರಿ' ಮತ್ತು 'ಪ್ರಚೋದನಕಾರಿ' ನಾಯಕನಿಗೆ ಕಡಕ್ ಎಚ್ಚರಿಕೆ ನೀಡಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಮೇರಿಕಾದ ಪರಮಾಣು ಶಸ್ತ್ರಾಸ್ತ್ರಗಳು ನಿಮ್ಮ ದೇಶವನ್ನು ನಾಶ ಮಾಡಬಲ್ಲವು ಎಂದಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಕಳೆದ ಶನಿವಾರ ನ್ಯೂಕ್ಲಿಯರ್ ಸಬ್ ಮೆರಿನ್ ಇಂದ ಕ್ಷಿಪಣಿಯನ್ನು ಪರೀಕ್ಷಿಸಿದ್ದಾರೆ ಎಂದು ವರದಿಯಾಗಿತ್ತು. ಇದರ ಫೋಟೊವೊಂದು ಲಭ್ಯವಿದ್ದರೂ ಅಧಿಕೃತ ಧೃಢೀಕರಣ ಸಿಕ್ಕಿಲ್ಲ.

ಉತ್ತರ ಕೊರಿಯಾ ಈಗಾಗಲೇ ಕ್ಷಿಪಣಿಯಿಂದ ಹಾರಿಸಬಲ್ಲ ಆರರಿಂದ ಎಂಟು ಪರಮಾಣು ಶಾಶ್ತಾಸ್ತ್ರ ಹೊಂದಿದೆ ಮತ್ತು ಈಗ ಸಬ್ ಮೆರೀನ್ ಪರಮಾಣು ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದರು ಅದು ಅಮೆರಿಕಾದ ಮೇಲೆ ದಾಳಿ ನಡೆಸುವಷ್ಟು ಸಶಕ್ತವಾಗಿದೆ ಎನ್ನಲಾಗಿದೆ.

"ನಮ್ಮ ಪರಮಾಣು ಶಾಶ್ತಾಸ್ತ್ರಗಳೊಂದಿಗೆ ಉತ್ತರ ಕೊರಿಯಾವನ್ನು ನಾಶ ಮಾಡಬಲ್ಲೆವು" ಎಂದು ಒಬಾಮಾ ಸಿಬಿಎಸ್ ನ್ಯೂಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ. "ಆದರೆ ಇದರಿಂದಾಗುವ ಮಾನವೀಯ ದುಷ್ಪರಿಣಾಮಗಳು ಮತ್ತು ಆ ದೇಶ ನಮ್ಮ ಮೈತ್ರಿ ದೇಶ ದಕ್ಷಿಣ ಕೊರಿಯಾದ ಪಕ್ಕದಲ್ಲಿರುವುದರಿಂದ ಹಿಂದೆ ಸರಿದಿದ್ದೇವೆ" ಎಂದು ಕೂಡ ಹೇಳಿದ್ದಾರೆ.

೨೦೧೧ರಲ್ಲಿ ಉತ್ತರ ಕೊರಿಯಾದ ಮುಖಂಡತ್ವ ಪಡೆದಿರುವ ಕಿಮ್ 'ಬೇಜವಬ್ದಾರಿ' ಮತ್ತು 'ಪ್ರಚೋದನಕಾರಿ'ಯಾಗಿ ವರ್ತಿಸುತ್ತಿದ್ದಾರೆ ಎಂದು ಕೂಡ ಒಬಾಮಾ ಹೇಳಿದ್ದಾರೆ.

ಅಮೆರಿಕಾ ನೌಕಾದಳದ ನ್ಯೂಕ್ಲಿಯಾರ್ ಸಬ್ ಮೆರೀನ್ ಗಳಿಗೆ ಅವರ ಸಬ್ ಮೆರಿನ್ ಗಳು ಸಾಟಿಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com