
ಬಾಗ್ದಾದ್: ಆಲ್ ಜಸೀರ ಮೀಡಿಯಾ ನೆಟ್ವರ್ಕ್ ನ ಬಾಗ್ದಾದ್ ಬ್ಯೂರೋ ಮುಚ್ಚುವಂತೆ ಮತ್ತು ದೇಶದಿಂದ ಆ ಸಂಸ್ಥೆಯ ಪತ್ರಕರ್ತರು ವರದಿ ಮಾಡದಿರುವಂತೆ ನಿಷೇಧ ಹೇರಿ ಇರಾಕ್ ಆದೇಶ ಹೊರಡಿಸಿದೆ.
ಬುಧವಾರ ಆಲ್ ಜಸೀರಗೆ ಬರೆದ ಪತ್ರದಲ್ಲಿ, ಪ್ರಸಾರ ನಿಯಮಗಳನ್ನು ಪಾಲನೆ ಪಾಡದೆ ಇರುವುದಕ್ಕೆ, ಪರವಾನಗಿ ಹಿಂಪಡೆಯುತ್ತಿರುವುದಾಗಿ ಸಂಪರ್ಕ ಮತ್ತು ಮಾಧ್ಯಮ ಕಮಿಷನ್ ಹೇಳಿದೆ.
ಇದರಿಂದ ಆಘಾತವಾಗಿದೆ ಎಂದಿರುವ ಮಾಧ್ಯಮ ಸಂಸ್ಥೆ ಇರಾಕ್ ನಿಂದ ವರದಿ ಮಾಡುವುದನ್ನು ಮುಂದುವರೆಸುವುದಾಗಿ ಹೇಳಿದೆ.
"ಇರಾಕ್ ನ ದೈನಂದಿಕ ಚಟುವಟಿಕೆಗಳು ಮತ್ತು ಸುದ್ದಿಯನ್ನು ಬಿತ್ತರಿಸುವುದಕ್ಕೆ ಆಲ್ ಜಸೀರ ತನ್ನ ಸಂಪಾದಕ ಮೌಲ್ಯಗಳಿಗೆ ಬದ್ಧವಾಗಿದೆ. ನಾವು ಜಾಗತಿಕವಾಗಿ ವೃತ್ತಿಪರತೆಯ ಉತ್ತುಂಗದಲ್ಲಿದ್ದೇವೆ ಮತ್ತು ಕಾರ್ಯಕ್ರಮಗಳ ಮತ್ತು ಸುದ್ದಿ ಬಿತ್ತರ ಮಾಡುವುದರ ನೈತಿಕತೆಯನ್ನು ಅನುಸರಿಸುತ್ತೇವೆ" ಎಂದು ಆಲ್ ಜಸೀರ ಹೇಳಿಕೆಯಲ್ಲಿ ತಿಳಿಸಿದೆ.
"ಇರಾಕ್ ಸಂವಿಧಾನದಲ್ಲಿ ನೀಡುವ ಮಾಧ್ಯಮ ಸ್ವಾತಂತ್ರ್ಯದ ಅನುಸಾರವಾಗಿ ಬಾಗ್ದಾದ್ ಬ್ಯೂರೋ ಮತ್ತೆ ಕೆಲಸಗಳನ್ನು ಪ್ರಾರಂಭಿಸುತ್ತದೆ ಎಂದು ನಂಬಿದ್ದೇವೆ" ಎಂದು ಆಜ್ ಜಸೀರ ಸುದ್ದಿ ವಾಹಿನಿ ಸಂಸ್ಥೆ ತಿಳಿಸಿದೆ.
Advertisement