ಜಾಗತಿಕ ತಾಪಮಾನ ಏರಿಕೆ ಪರಿಣಾಮ ಸಮುದ್ರ ಜಲದಲ್ಲಿ ಆಕ್ಸಿಜನ್ ಪ್ರಮಾಣ ಕುಸಿತ

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರಜಲದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ ಎಂದು ಅಧ್ಯಯನ ವರದಿಗಳಿಂದ ತಿಳಿದು...
ಸಮುದ್ರ
ಸಮುದ್ರ
ನ್ಯೂಯಾರ್ಕ್: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರಜಲದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ ಎಂದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ. 
ಜಗತ್ತಿನ ಹಲವು ಪ್ರದೇಶಗಳಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎಂದು ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಅಟಮೋಸ್ಪಿಯರಿಕ್ ಅಧ್ಯಯನ ತಂಡದ ತಜ್ಞರು ಹೇಳಿದ್ದಾರೆ.
ಹೀಗೆ ಮುಂದುವರಿದರೆ 2030- 2040ರ ವೇಳೆಗೆ ಇದು ಇನ್ನೂ ಹಲವು ಸ್ತರಗಳಿಗೆ ವ್ಯಾಪಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 
ಸಮುದ್ರ ಜಲದಲ್ಲಿ ಆಕ್ಸಿಜನ್‌ನ ಪ್ರಮಾಣ ಕಡಿಮೆಯಾದರೆ ಅಲ್ಲಿರುವ ಮೀನುಗಳು ಮತ್ತು ಇನ್ನಿತರ ಸಮುದ್ರ ಜೀವಿಗಳ ವಿನಾಶಕ್ಕೆ ಇದು ಕಾರಣವಾಗುತ್ತದೆ. ಆದ್ದರಿಂದ ಜಾಗತಿಕ ತಾಪಮಾನ ಏರಿಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅಧ್ಯಯನ ತಂಡದ ನಾಯಕ  ಮಾಥ್ಯೂ ಲಾಂಗ್ ಹೇಳಿದ್ದಾರೆ.
ಸಮುದ್ರ ಜಲದಲ್ಲಿರುವ ಆಕ್ಸಿಜನ್‌ನ ಪ್ರಮಾಣವು ಸಮುದ್ರದ ಮೇಲ್ಭಾಗದಲ್ಲಿರುವ ಉಷ್ಣತೆ ಮತ್ತು ಗಾಳಿಯನ್ನು ಅವಲಂಬಿಸಿರುತ್ತದೆ. ಹವಾಮಾನದಲ್ಲಾಗುವ ಬದಲಾವಣೆಗಳು ಸಮುದ್ರದಲ್ಲಿನ ಆಕ್ಸಿಜನ್‌ನ ಏರಿಳಿತಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com