ಈಕ್ವೆಡಾರ್ ಭೂಕಂಪನ: ಸತತ 13 ದಿನಗಳ ಬಳಿಕ ಸಾವನ್ನೇ ಗೆದ್ದೆ 72ರ ವೃದ್ಧ

ಭೂಕಂಪನದಿಂದಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 72 ರ ವೃದ್ಧ ಸಾವನ್ನೇ ಗೆದ್ದು, ಸತತ 13 ದಿನಗಳ ಬಳಿಕ ರಕ್ಷಣಾ ಸಿಬ್ಬಂದಿಗಳ ಸಹಾಯದಿಂದ ಯಶಸ್ವಿಯಾಗಿ ಹೊರಬಂದಿದ್ದಾನೆ...
ಸಾವನ್ನೇ ಗೆದ್ದ ವೃದ್ಧ ಮ್ಯಾಲುವೆಲ್
ಸಾವನ್ನೇ ಗೆದ್ದ ವೃದ್ಧ ಮ್ಯಾಲುವೆಲ್
Updated on

ಕ್ವಿಟೋ: ಅದೃಷ್ಟ ಮತ್ತು ಆಯಸ್ಸು ಗಟ್ಟಿಯಾಗಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಕೂಡ ಯಶಸ್ವಿಯಾಗಿ ಎದುರಿಸಬಹುದು ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು,  ಭೂಕಂಪನದಿಂದಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 72 ರ ವೃದ್ಧ ಸಾವನ್ನೇ ಗೆದ್ದು, ಸತತ 13 ದಿನಗಳ ಬಳಿಕ ರಕ್ಷಣಾ ಸಿಬ್ಬಂದಿಗಳ ಸಹಾಯದಿಂದ ಯಶಸ್ವಿಯಾಗಿ ಹೊರಬಂದಿದ್ದಾನೆ.

ಈಕ್ವೆಡಾರ್​ನಲ್ಲಿ ಕಳೆದ 15 ದಿನಗಳ ಹಿಂದೆ ಸಂಭವಿಸಿದ್ದ ಪ್ರಬಲ ಭೂಕಂಪನದಲ್ಲಿ ಕುಸಿದ ಕಟ್ಟಡದ ಅವಶೇಷಗಳಿಡಿ ಸಿಲುಕಿದ್ದ 72 ವರ್ಷದ ವೃದ್ಧರೊಬ್ಬರನ್ನು 13 ದಿನಗಳ ಬಳಿಕ  ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈಕ್ವೆಡಾರ್​ನ ಮನಬಿ ಪ್ರಾಂತ್ಯದಲ್ಲಿ ರಕ್ಷಣಾ ಸಿಬ್ಬಂದಿಗಳು ಅವಶೇಷಗಳನ್ನು ತೆರವುಗೊಳಿಸುತ್ತಿರುವ ವೇಳೆ ಮಾನುವೆಲ್ ವಾಸ್ಕೆಜ್ (72) ಎಂಬ ವೃದ್ಧನನ್ನು  ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕುಸಿದ ಬಿದ್ದಿದ್ದ ಕಟ್ಟಡದದ ಅವಶೇಷಗಳಡಿಯಿಂದ ಮಾನುವೆಲ್ ಸಹಾಯಕ್ಕಾಗಿ  ಮೊರೆ ಇಡುತ್ತಿದ್ದರು. ಇದನ್ನು ಕೇಳಿದ ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ವೃದ್ಧನನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ಸತತ 13 ದಿನಗಳಿಂದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಪರಿಣಾಮ ಮಾನುವೆಲ್ ಅವರಿಗೆ ಮೂತ್ರಿಪಿಂಡದ ವೈಫಲ್ಯ, ಮೂತ್ರನಾಳದ ಸಮಸ್ಯೆ, ಕಾಲ್ಬೆರಳುಗಳು ಕೊಳೆತಿದ್ದು,  ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಅವರ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು  ಹೇಳಿದ್ದಾರೆ.

ಈಕ್ವೆಡಾರ್ ನಲ್ಲಿ ಕಳೆದ ಅಂದರೆ ಏಪ್ರಿಲ್ 16 ರಂದು ನಡೆದ 7.8 ತೀವ್ರತೆ ಭೂಕಂಪನಕ್ಕೆ ಸುಮಾರು 660 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ನೂರೂರು ಬೃಹತ್  ಕಟ್ಟಡಗಳು ನೆಲಕ್ಕುರುಳಿದ್ದು, ಇಂದಿಗೂ ರಕ್ಷಣಾ ಕಾರ್ಯಾಚರಣೆ ಮತ್ತು ಕಟ್ಟಡಗಳ ಅವಶೇಷಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com