ಪಂಜಾಬ್ ಸರ್ಕಾರದ ಹೆಲಿಕಾಪ್ಟರ್ ಪತನ; ಬೆಂಕಿ ಹಚ್ಚಿ, ಸಿಬ್ಬಂದಿ ಒತ್ತೆ ಇರಿಸಿಕೊಂಡ ತಾಲಿಬಾನ್
ಇಸ್ಲಾಮಾಬಾದ್: ಪಂಜಾಬ್ ಸರ್ಕಾರಕ್ಕ ಸೇರಿದ್ದು ಎನ್ನಲಾಗುತ್ತಿರುವ ಹೆಲಿಕಾಪ್ಟರ್ ವೊಂದು ಆಫ್ಘಾನಿಸ್ತಾನದಲ್ಲಿ ಪತನವಾಗಿದ್ದು, ಕೆಳಕ್ಕೆ ಬಿದ್ದ ಕಾಪ್ಚರ್ ಗೆ ಸ್ಥಳೀಯ ತಾಲಿಬಾನ್ ಉಗ್ರರು ಬೆಂಕಿ ಹಚ್ಚಿ ಅದರೊಳಗಿದ್ದ ಸುಮಾರು 7 ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ದೈನಿಕ ಡಾನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ವರದಿಯಲ್ಲಿ ಪಂಜಾಬ್ ಸರ್ಕಾರಕ್ಕೆ ಸೇರಿದ ಹೆಲಿಕಾಪ್ಟರ್ ತಾಲಿಬಾನ್ ಪ್ರಾಂತ್ಯ ಲೋಗರ್ ನಲ್ಲಿ ಪತನವಾಗಿದೆ. ಈ ವೇಳೆ ಹೆಲಿಕಾಪ್ಟರ್ ನಲ್ಲಿದ್ದ ಸುಮಾರು 7 ಮಂದಿಯನ್ನು ವಶಕ್ಕೆ ಪಡೆದ ತಾಲಿಬಾನ್ ಉಗ್ರರು ಬಳಿಕ ಹೆಲಿಕಾಪ್ಟರ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತದೆ.
ಮತ್ತೊಂದು ವರದಿಯ ಪ್ರಕಾರ ದುರಂತಕ್ಕೀಡಾದ ವಿಮಾನ ಪಾಕಿಸ್ತಾನ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಆದರೆ ಈ ಬಗ್ಗೆ ಪಾಕಿಸ್ತಾನ ಸರ್ಕಾರ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸ್ಥಳೀಯ ತಾಗರ್ ಪ್ರಾಂತ್ಯದ ರಾಜ್ಯಪಾಲರ ಕಚೇರಿ ವಕ್ತಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಜ್ರಾ ಜಿಲ್ಲೆಯ ಮಟಿ ಎನ್ನುವಲ್ಲಿ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಅದರಲ್ಲಿ ಪ್ರಯಾಣ ಬೆಳೆಸಿದವರು ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆಯಾಗಲಿ ಅಥವಾ ದಂಗೆಕೋರರ ವಶದಲ್ಲಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತನಿಖೆಯ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ