ಮುಂಬೈಯ 26/11 ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಪಾಕಿಸ್ತಾನದಲ್ಲಿ ಬಂಧನ

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತನನ್ನು ಭದ್ರತಾ ದಳ...
ಮುಂಬೈಯಲ್ಲಿ ಉಗ್ರರ ದಾಳಿಗೊಳಗಾದ ತಾಜ್ ಹೊಟೇಲ್
ಮುಂಬೈಯಲ್ಲಿ ಉಗ್ರರ ದಾಳಿಗೊಳಗಾದ ತಾಜ್ ಹೊಟೇಲ್
ಇಸ್ಲಾಮಾಬಾದ್: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತನನ್ನು ಭದ್ರತಾ ದಳ ಅಧಿಕಾರಿಗಳು ಪಾಕಿಸ್ತಾನದಲ್ಲಿ ಬಂಧಿಸಿದ್ದಾರೆ ಎಂದು ನಿನ್ನೆ ತಡರಾತ್ರಿ ಘೋಷಿಸಲಾಗಿದೆ.
ಅನೇಕ ವಿದೇಶಿಯರು ಸೇರಿದಂತೆ 160 ಮಂದಿಯನ್ನು ಬಲಿಪಡೆದುಕೊಂಡು 308 ಜನರಿಗೆ ಗಾಯವಾಗಿದ್ದ ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸಿತ್ತು.  ಈ ದಾಳಿಗೆ ಸಂಬಂಧಿಸಿದ ಶಂಕಿತ ಸುಫಿಯನ್ ಝಫರ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈತ ದಾಳಿಯ ಮುಖ್ಯ ಶಂಕಿತ ಹಮ್ಮದ್ ಅಮಿನ್ ಸಾದಿಕ್ ಎಂಬಾತನಿಗೆ ಹಣಕಾಸಿನ ನೆರವು ಒದಗಿಸಿದ್ದ ಎಂದು ನಿಕಟ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಶಂಕಿತನಿಗೆ 8 ದಿನಗಳ ದೈಹಿಕ ಹವಾಲತ್ತು ನೀಡಿದೆ ಎಂದು ತಿಳಿದುಬಂದಿದೆ.
ನಿರ್ದೇಶಕ ಮಜ್ಹರ್ ಕಾಕಕ್ಹೇಲ್ ನೇತೃತ್ವದ ಫೆಡರಲ್ ತನಿಖಾ ಸಂಸ್ಥೆ ಶಂಕಿತನನ್ನು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com