ಫ್ರಾನ್ಸ್: 'ಅಲ್ಲಾಹ್' ಎಂದಿದ್ದಕ್ಕೆ ಮುಸ್ಲಿಂ ದಂಪತಿಗಳನ್ನು ವಿಮಾನದಿಂದ ಕೆಳಗಿಳಿಸಿದರು!

ಫ್ರಾನ್ಸ್ ನಿಂದ ಅಮೆರಿಕಾಗೆ ತೆರಳುತ್ತಿದ್ದ ಡೆಲ್ಟಾ ಏರ್ ಲೈನ್ ನಲ್ಲಿ ಮುಸ್ಲಿಂ ದಂಪತಿಯೊಬ್ಬರು ಅಲ್ಲಾ ಎಂದಿದ್ದಕ್ಕೆ ವಿಮಾನದಿಂದ ಕೆಳಗಿಳಿಸಿ ವಿಚಾರಣೆ ನಡೆಸಲಾಗಿದೆ.
ಫ್ರಾನ್ಸ್: 'ಅಲ್ಲಾಹ್' ಎಂದಿದ್ದಕ್ಕೆ ಮುಸ್ಲಿಂ ದಂಪತಿಗಳನ್ನು ವಿಮಾನದಿಂದ ಕೆಳಗಿಳಿಸಿದರು!

ಫ್ರಾನ್ಸ್: ಫ್ರಾನ್ಸ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸುವಾಗ 'ಅಲ್ಲಾ ಹು ಅಕ್ಬರ್‌' ಎಂದು ಕೂಗಿದ್ದ ಉದಾಹರಣೆಗಳಿಂದ ಫ್ರಾನ್ಸ್ ನ ಜನತೆ ಎಷ್ಟು ಭಯಭೀತರಾಗಿದ್ದಾರೆ ಎಂದರೆ ಆ ಶಬ್ದ ಕೇಳಿದರೆ ಅಹಿತಕರ ವಾತಾವರಣ ಎದುರಿಸುವ ರೀತಿ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಫ್ರಾನ್ಸ್ ನಿಂದ ಅಮೆರಿಕಾಗೆ ತೆರಳುತ್ತಿದ್ದ ಡೆಲ್ಟಾ ಏರ್ ಲೈನ್ ನಲ್ಲಿ ಮುಸ್ಲಿಂ ದಂಪತಿಯೊಬ್ಬರು ಅಲ್ಲಾ ಎಂದು ಹೇಳಿರುವುದು ವಿಮಾನದ ಸಿಬ್ಬಂದಿಗೆ ಅಹಿತಕಾರಿಯಾಗಿ ಕೇಳಿಸಿದ್ದು ಮುಸ್ಲಿಂ ದಂಪತಿಗಳನ್ನು ವಿಮಾನದಿಂದ ಕೆಳಗಿಳಿಸಿ ವಿಚಾರಣೆ ನಡೆಸಲಾಗಿದೆ.

ಪಾಕಿಸ್ತಾನಿ-ಅಮೆರಿಕದ ಮುಸ್ಲಿಂ ದಂಪತಿಗಳಾಗಿದ್ದ ನಾಜಿಯಾ ಹಾಗೂ ಫೈಸಲ್ ಇಬ್ಬರೂ ಪ್ಯಾರಿಸ್ ನಿಂದ ಅಮೆರಿಕದ ಸಿನ್ಸಿನ್ನಾಟಿಗೆ ಹೊರಟಿದ್ದರು. ವಿಮಾದಲ್ಲಿ ಕುಳಿತ ನಾಜಿಯಾ ತಮ್ಮ ಪೋಷಕರಿಗೆ ಮೆಸೇಜ್ ಮಾಡಿ, ಬೆವರುತ್ತಿದ್ದಿದ್ದರಿಂದ ಅಲ್ಲಾ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ವಿಮಾನದ ಸಿಬ್ಬಂದಿ ಮುಸ್ಲಿಂ ದಂಪತಿಗಳು ಅಲ್ಲಾ ಎಂದು ಹೇಳಿದ್ದನ್ನು ಹಾಗೂ ತಮಗೆ ಇದು ಅಹಿತಕಾರಿಯಾಗಿದೆ ಎಂದು ಪೈಲಟ್ ಗೆ ತಿಳಿಸಿದ್ದಾರೆ.

ತಕ್ಷಣವೇ ಪೈಲಟ್ ವಿಮಾನದ ಹೊರಗಿದ್ದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ವಿಮಾನದಿಂದ ಆ ದಂಪತಿಗಳನ್ನು ಕೆಳಗಿಳಿಸುವವರೆಗೂ ವಿಮಾನ ಟೇಕ್ ಆಫ್ ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ದಂಪತಿಗಳನ್ನು ಕೆಳಗಿಳಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ.  ಇದರಿಂದ ಅಸಮಾಧಾನಗೊಂಡ ಮುಸ್ಲಿಂ ಸಂಘಟನೆಯೊಂದು ಡೆಲ್ಟಾ ಏರ್ ಲೈನ್ಸ್ ವಿರುದ್ಧ ಪ್ರಕಕಾರಣ ದಾಖಲಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡೆಲ್ಟಾ ಏರ್ ಲೈನ್ಸ್, ಯಾವುದೇ ಧಾರ್ಮಿಕ, ಜನಾಂಗದ ಆಧಾರದಲ್ಲಿ ತನ್ನ ಗ್ರಾಹಕರಿಗೆ ತಾರತಮ್ಯ ತೋರುವುದನ್ನು ಸಂಸ್ಥೆ ಖಂಡಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದು, ಈ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com