ಅಮೆರಿಕದಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ!

ಹಕ್ಕಾನಿ ಉಗ್ರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಇನ್ನು ಮುಂದೆ ಅಮೆರಿಕದಿಂದ ಸಿಗುತ್ತಿದ್ದ ಬ್ಲಾಂಕ್ ಚೆಕ್ ಗಳಿಗೆ ಕತ್ತರಿ ಬೀಳಲಿದೆ.
ಅಮೆರಿಕದಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ!
ಅಮೆರಿಕದಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ!

ವಾಷಿಂಗ್ ಟನ್: ಹಕ್ಕಾನಿ ಉಗ್ರ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಇನ್ನು ಮುಂದೆ ಅಮೆರಿಕದಿಂದ ಸಿಗುತ್ತಿದ್ದ ಬ್ಲಾಂಕ್ ಚೆಕ್ ಗಳಿಗೆ ಕತ್ತರಿ ಬೀಳಲಿದೆ. ಹೌದು ಈ ಮಾಹಿತಿಯನ್ನು ಖುದ್ದು ಅಮೇರಿಕ ತಜ್ಞರೇ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆಗಾಗಿ ಪಾಕಿಸ್ತಾನಕ್ಕೆ ಅಮೆರಿಕ ಅಪಾರ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡುತ್ತಿತ್ತು. ಆದರೆ ಪಾಕಿಸ್ತಾನ ಆಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕನ್ನರ ಸಾವಿಗೆ ಕಾರಣವಾಗಿರುವ ಹಕ್ಕಾನಿ ಉಗ್ರ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ಅಮೆರಿಕ ಪಾಕಿಸ್ತಾನಕ್ಕೆ ನೀಡಬೇಕಿದ್ದ 300 ಮಿಲಿಯನ್ ಡಾಲರ್ ಹಾಗೂ ಸೇನಾ ನೆರವನ್ನು ನೀಡಲು ನಿರಾಕರಿಸಿದ್ದು, ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿದ್ದ ಬ್ಲಾಂಕ್ ಚೆಕ್ ಗಳಿಗೆ  ಇನ್ನು ಮುಂದೆ ಕತ್ತರಿ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಗ್ಗೆ ಅಮೆರಿಕ ಶ್ವೇತ ಭವನದ ಮಾಜಿ ಅಧಿಕಾರಿ, ಅಂತಾರಾಷ್ಟ್ರೀಯ ಭದ್ರತಾ ಯೋಜನೆಯ ಕುರಿತಾದ ಅಮೆರಿಕದ ಚಿಂತಕರ ಚಾವಡಿಯ ಸದಸ್ಯರಾಗಿರುವ ಶಾಮೀಲಾ ಚೌಧರಿ ಮಾತನಾಡಿದ್ದು, ಪಾಕಿಸ್ತಾನ ಹಕ್ಕಾನಿ ಉಗ್ರ ಜಾಲದ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ  ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಅಮೆರಿಕ ಕಾಂಗ್ರೆಸ್ ಗೆ ಸೂಕ್ತ ಮಾಹಿತಿ ನೀಡದಿರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದಿಂದ ಪಾಕಿಸ್ತಾನಕ್ಕೆ ಸಿಗಬೇಕಿದ್ದ 300 ಮಿಲಿಯನ್ ಡಾಲರ್ ನೆರವಿಗೆ ಕತ್ತರಿ ಬಿದ್ದಿದ್ದು, ಇನ್ನು ಮುಂದೆಯೂ ಸಹ ಅಮೆರಿಕದಿಂದ  ಸಿಗುತ್ತಿದ್ದ ಹಣದ ನೆರವು ಸ್ಥಗಿತವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com