ಬಂಧನ
ಬಂಧನ

ಸೌದಿ ಅರೇಬಿಯಾದಲ್ಲಿ ಕರ್ನಾಟಕದ ಮೂಲದ ಉಗ್ರ ಸಬೀಲ್ ಅಹ್ಮದ್ ಬಂಧನ

ಲಷ್ಕರ್ ಇ ತೊಯ್ಬಾ ಹಾಗೂ ಅಲ್ ಖೈದಾ ಉಗ್ರ ಸಂಘಟನೆಗಳಿಗೆ ನೇಮಕಾತಿ ನಡೆಸುತ್ತಿದ್ದ ಭಾರತೀಯ ಮೂಲದ ಸಬೀಲ್ ಅಹ್ಮದ್ ಎಂಬಾತನನ್ನು ಸೌದಿ...

ರಿಯಾಧ್: ಲಷ್ಕರ್ ಇ ತೊಯ್ಬಾ ಹಾಗೂ ಅಲ್ ಖೈದಾ ಉಗ್ರ ಸಂಘಟನೆಗಳಿಗೆ ನೇಮಕಾತಿ ನಡೆಸುತ್ತಿದ್ದ ಭಾರತೀಯ ಮೂಲದ ಸಬೀಲ್ ಅಹ್ಮದ್ ಎಂಬಾತನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ.

8 ವರ್ಷಗಳ ಹಿಂದೆ ಗ್ಲಾಸ್ಗೋ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಸಹೋದರ ಕಪೀಲ್ ಅಹ್ಮದ್ ಯೋಜನೆಯ ಮಾಹಿತಿಯನ್ನು ತಡೆ ಹಿಡಿದಿದ್ದಕ್ಕಾಗಿ ಡಾ. ಸಬೀಲ್ ಅಹ್ಮದ್ ನನ್ನು 18 ತಿಂಗಳ ಕಾಲ ಜೈಲಿಗೆ ಹಾಕಲಾಗಿತ್ತು. ನಂತರ 2008ರಲ್ಲಿ ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡುವಲ್ಲಿ ಮುಖ್ಯ ಪಾತ್ರವಹಿಸಿ ಭೂಗತ ಕಾರ್ಯಾಚರಣೆ ನಡೆಸುತ್ತಿದ್ದ ಸಬೀಲ್ ಅಹ್ಮದ್ ನನ್ನೇ ಸೌದಿ ಅರೇಬಿಯಾದಲ್ಲಿ ಬಂಧಿಸಿರುವುದು ಖಚಿತಪಟ್ಟರೇ ಇದು ಒಂದು ಮೇಜರ್ ಕ್ಯಾಚ್ ಎಂದಾಗಲಿದೆ.

ಸದ್ಯ ಭಾರತೀಯ ಭದ್ರತಾ ದಳದ ಅಧಿಕಾರಿಗಳು ಸಬೀಲ್ ಬಂಧನ ಹಾಗೂ ಆತನ ಗುರುತನ್ನು ಖಚಿತಪಡಿಸಿಕೊಳ್ಳಲು ಸೌದಿ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.

ಸಬೀಲ್ ಅಹ್ಮದ್ ಮೂಲತಃ ಬೆಂಗಳೂರಿನವನಾಗಿದ್ದು, 2007ರಲ್ಲಿ ಈತನನ್ನು ಲಿವರ್ ಪೂಲ್ ನಲ್ಲಿ ಬಂಧಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com