ಕರಾಚಿಯಲ್ಲಿ ಹಿಂದೂ ವೈದ್ಯನ ಹತ್ಯೆ: ಹತ್ಯೆಗೆ ಧಾರ್ಮಿಕ ಸಂಘರ್ಷ ಕಾರಣ ಶಂಕೆ

ಪಾಕಿಸ್ತಾನದಲ್ಲಿ ಮತ್ತೆ ಧಾರ್ಮಿಕ ಸಂಘರ್ಷ ಮುಂದುವರೆದಿದ್ದು, ಕರಾಚಿಯ ಖಾಸಗಿ ಆಸ್ಪತ್ರೆ ಮುಂಭಾಗದಲ್ಲೇ ಹಿಂದೂ ವೈದ್ಯರೊಬ್ಬರನ್ನು ಗುಂಡಿಕ್ಕಿ ಕೊಲ್ಲಲ್ಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನದಲ್ಲಿ ಮತ್ತೆ ಧಾರ್ಮಿಕ ಸಂಘರ್ಷ ಮುಂದುವರೆದಿದ್ದು, ಕರಾಚಿಯ ಖಾಸಗಿ ಆಸ್ಪತ್ರೆ ಮುಂಭಾಗದಲ್ಲೇ ಹಿಂದೂ ವೈದ್ಯರೊಬ್ಬರನ್ನು ಗುಂಡಿಕ್ಕಿ ಕೊಲ್ಲಲ್ಲಾಗಿದೆ.

ಮೃತ ವೈದ್ಯರನ್ನು 56 ವರ್ಷದ ಡಾ. ಪ್ರೀತಮ್ ಲಖ್ವಾನಿ ಎಂದು ಗುರುತಿಸಲಾಗಿದ್ದು, ಕರಾಚಿಯ ಬಾರಾ ಮಾರ್ಗದಲ್ಲಿನ ಪಾರ್ಕ್ ಕಾಲೋನಿಯ ಗಾರ್ಡನ್ ಈಸ್ಟ್​ನಲ್ಲಿನ ಮನೆಗೆ ಹಿಂದಿರುಗುವೇ  ವೇಳೆ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಡಾ.ಲಖ್ವಾನಿ ಅವರನ್ನು ಅಬ್ಬಾಸಿ ಶಾಹೀದ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ,  ಗಂಭೀರವಾಗಿದ್ದ ಅವರನ್ನು ಬಳಿಕ ಅಲ್ಲಿಂದ ಅಗಾಖಾನ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು  ಮಾಹಿತಿ ತಿಳಿಸಿದ್ದಾರೆ.

ಇನ್ನು ಹತ್ಯೆಯ ಹಿಂದೆ ಧಾರ್ಮಿಕ ಸಂಘರ್ಷವೇ ಕಾರಣ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಲಖ್ವಾನಿ ಅವರ ಪುತ್ರ ರಾಕೇಶ್ ಕುಮಾರ್, ತಂದೆ ಹತ್ಯೆಯಾಗಿರುವ  ಸುದ್ದಿಯನ್ನು ಅಪರಿಚಿತರೊಬ್ಬರು ತಂದೆಯದೇ ಫೋನ್​ನಿಂದ ಕರೆ ಮಾಡಿ ತಿಳಿಸಿದರು. ತಂದೆ ಹತ್ಯೆಗೀಡಾಗುವಂತಹ ಯಾವುದೇ ಅಹಿತಕರವಾದ ಘಟನೆ ನಡೆದಿರಲಿಲ್ಲ. ಅವರಿಗೆ ಯಾರೂ ಬೆದರಿಕೆ ಹಾಕಿದ್ದೂ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಕರಾಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com