ಯುದ್ಧಕ್ಕೆ ಚೀನಾ ಸಿದ್ಧತೆ? ವಿವಾದಿತ ಸಮುದ್ರದಲ್ಲಿ ಸೇನಾ ವಿಮಾನ ನಿಲ್ದಾಣ ನಿರ್ಮಾಣ

ವಿಶ್ವಸಂಸ್ಥೆಯ ನ್ಯಾಯಮಂಡಳಿ ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಚೀನಾ ವಿರುದ್ಧ ತೀರ್ಪು ನೀಡಿರುವುದು ಚೀನಾವನ್ನು ಸಂಕಷ್ಟಕ್ಕೀಡುಮಾಡಿದ್ದು, ಇದೀಗ...
ದಕ್ಷಿಣ ಚೀನಾ ಸಮುದ್ರ
ದಕ್ಷಿಣ ಚೀನಾ ಸಮುದ್ರ
ವಾಷಿಂಗ್ಟನ್‌: ವಿಶ್ವಸಂಸ್ಥೆಯ ನ್ಯಾಯಮಂಡಳಿ ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಚೀನಾ ವಿರುದ್ಧ ತೀರ್ಪು ನೀಡಿರುವುದು ಚೀನಾವನ್ನು ಸಂಕಷ್ಟಕ್ಕೀಡುಮಾಡಿದ್ದು, ಇದೀಗ ಚೀನಾ ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಸ್ವಯಂಘೋಷಿತ ಪಾರಮ್ಯವನ್ನು ಇನ್ನಷ್ಟು ಬಿಗಿ ಗೊಳಿಸುವ ನಿಟ್ಟಿನಲ್ಲಿ ಸ್ಪಾರ್ಟ್‌ಲೀ ದ್ವೀಪಗಳಲ್ಲಿನ ತನ್ನ ನೆಲೆಗಳಲ್ಲಿ ವಿಮಾನ ತಂಗುದಾಣಗಳನ್ನು ನಿರ್ಮಿಸುತ್ತಿದೆ. ಈ ಮೂಲಕ ಬಹುತೇಕ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಅಂತಾರಾಷ್ಟ್ರೀಯ ವ್ಯೂಹಗಾರಿಕೆ ಅಧ್ಯಯನ ಕೇಂದ್ರ (ಸಿಎಸ್‌ಐಎಸ್‌) ಎಂಬ ಚಿಂತನ ಚಾವಡಿ ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ದಿ ಹೇಗ್‌ನಲ್ಲಿನ ಅಂತಾರಾಷ್ಟ್ರೀಯ ನ್ಯಾಯ ಮಂಡಳಿಯು ಚೀನಾಕ್ಕೆ ದಕ್ಷಿಣ ಚೀನಾ ಸಮುದ್ರದ ಮೇಲೆ ಯಾವುದೇ ಐತಿಹಾಸಿಕ ಹಕ್ಕು ಇಲ್ಲ ಎಂಬ ತೀರ್ಪು ನೀಡಿತ್ತು. ಆದರೆ ತಾನು ಈ ತೀರ್ಪನ್ನು ಮಾನ್ಯ ಮಾಡುವುದಿಲ್ಲ ಎಂದು ಚೀನಾ ಸೆಡ್ಡು ಹೊಡೆದಿತ್ತು.
ಅಪಾರ ನೈಸರ್ಗಿಕ ಸಂಪತ್ತಿನಿಂದ ಕೂಡಿರುವ ದಕ್ಷಿಣ ಚೀನಾ ಸಮುದ್ರದ ಮೇಲೆ ತಮಗೂ ಹಕ್ಕಿದೆ ಎಂದು ಫಿಲಿಪ್ಪೀನ್ಸ್‌, ವಿಯೆಟ್ನಾಂ, ಮಲೇಶ್ಯ, ತೈವಾನ್‌ ಮತ್ತು ಬ್ರುನೇಯಿ ವಾದಿಸಿದ್ದು ದಿ ಹೇಗ್‌ ಕೋರ್ಟ್‌ ತೀರ್ಪಿನ ಫ‌ಲಿತಾಂಶದಿಂದಾಗಿ ದ. ಚೀನ ಸಮುದ್ರವು ಈಗ ವಿವಾದಿತವಾಗಿದೆ.
ದಕ್ಷಿಣ ಚೀನ ಸಮುದ್ರದ ಬಹುಭಾಗದ ಮೇಲಿನ ತನ್ನ ಸ್ವಯಂ ಘೋಷಿತ ಪಾರಮ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ಅಲ್ಲೀಗ ಸಕಲ ರೀತಿಯ ಸಮರ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ತನ್ನ ಹಿಡಿತದಲ್ಲಿರುವ ಸ್ಪಾರ್ಟ್‌ಲೀ ದ್ವೀಪದಲ್ಲಿ ಚೀನಾ ವಿಮಾನ ತಂಗುದಾಣಗಳನ್ನು ನಿರ್ಮಿಸುತ್ತಿದೆ. ಹಾಗೆಂದು ಅದು ಅಲ್ಲಿ ತನ್ನ ಸಮರ ವಿಮಾನಗಳನ್ನು ಇನ್ನೂ ನಿಲ್ಲಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com