ತಾಲಿಬಾನ್ ಒತ್ತೆಯಲ್ಲಿದ್ದ ಪಾಕಿಸ್ತಾನ ಕಾಪ್ಟರ್ ಸಿಬ್ಬಂದಿ ಬಿಡುಗಡೆ

ತಾಲಿಬಾನ್ ಉಗ್ರ ಸಂಘಟನೆಯ ವಶದಲ್ಲಿರುವ ಪ್ರದೇಶದಲ್ಲಿ ಪತನವಾಗಿದ್ದ ಪಾಕಿಸ್ತಾನದ ಪಂಜಾಬ್ ಸರ್ಕಾರಕ್ಕೆ ಸೇರಿದ್ದ ಹೆಲಿಕಾಪ್ಟರ್ ನಲ್ಲಿದ್ದ ಸಿಬ್ಬಂದಿಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪತನವಾಗಿದ್ದ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)
ಪತನವಾಗಿದ್ದ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)

ಕಾಬೂಲ್: ತಾಲಿಬಾನ್ ಉಗ್ರ ಸಂಘಟನೆಯ ವಶದಲ್ಲಿರುವ ಪ್ರದೇಶದಲ್ಲಿ ಪತನವಾಗಿದ್ದ ಪಾಕಿಸ್ತಾನದ ಪಂಜಾಬ್ ಸರ್ಕಾರಕ್ಕೆ ಸೇರಿದ್ದ ಹೆಲಿಕಾಪ್ಟರ್ ನಲ್ಲಿದ್ದ ಸಿಬ್ಬಂದಿಗಳನ್ನು ಶನಿವಾರ ಬಿಡುಗಡೆ  ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ವ್ಯಾಪ್ತಿಯ ಪಂಜಾಬ್ ಸರ್ಕಾರಕ್ಕೆ ಸೇರಿದ್ದ ಹೆಲಿಕಾಪ್ಟರ್ ಕಳೆದ ಆಗಸ್ಟ್ 4ರಂದು ತಾಂತ್ರಿಕ ದೋಷದಿಂದ ತಾಲಿಬಾನ್ ಪ್ರಾಂತ್ಯದಲ್ಲಿ ಪತನವಾಗಿತ್ತು. ಅದರೊಳಗಿದ್ದ ಸುಮಾರು 6  ಮಂದಿ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದರಾದರೂ ಅವರನ್ನು ತಾಲಿಬಾನ್ ಮೂಲಭೂತವಾದಿಗಳು ವಶದಲ್ಲಿರಿಸಿಕೊಂಡಿದ್ದರು. ಪಾಕಿಸ್ತಾನ ಸರ್ಕಾರದ ಮೂಲಗಳ ಪ್ರಕಾರ ಈ ಆರು  ಜನರ ಪೈಕಿ ಐವರು ಪಾಕಿಸ್ತಾನ ಸರ್ಕಾರದ ಸಿಬ್ಬಂದಿಗಳು ಮತ್ತು ಓರ್ವ ರಷ್ಯಾ ದೇಶದ ಪ್ರತಿನಿಧಿ ಇದ್ದರು ಎಂದು ಹೇಳಿದೆ.

ಇನ್ನು ಕಳೆದ ಆಗಸ್ಟ್ 4ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ರಷ್ಯಾದತ್ತ ಸಾಗಿದ್ದ ಸರ್ಕಾರಿ ಎಂಐ-17 ಹೆಲಿಕಾಪ್ಟರ್ ತಾಂತ್ರಿಕದೋಷದಿಂದಾಗಿ ತಾಲಿಬಾನ್ ಪ್ರಾಂತ್ಯದಲ್ಲಿ  ಪತನವಾಗಿತ್ತು. ಈ  ವೇಳೆ ತಾಲಿಬಾನ್ ಮೂಲಭೂತವಾದಿಗಳು 6 ಮಂದಿಯನ್ನು ಅಪಹರಿಸಿದ್ದರು. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರು ಸಭೆ ನಡೆಸಿ  ಒತ್ತೆಯಾಳುಗಳ ಬಿಡುಗಡೆಗೆ ಪ್ರಯತ್ನಿಸಿದ್ದರು. ಇದರ ಫಲವಾಗಿ ಇಂದು ತಾಲಿಬಾನ್ ಸಂಘಟನೆ 6 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಆದರೆ ಅಂದು ಪತನವಾಗಿದ್ದ ಹೆಲಿಕಾಪ್ಟರ್ ನಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತಿಳಿಸಿರುವಂತೆ ಪ್ರಸ್ತುತ 6 ಮಂದಿಯನ್ನು ಖುರ್ರಾಮ್  ಮೂಲಭೂತ ಪ್ರಾಂತ್ಯದ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com