ದಿನವಿಡೀ ಎಸ್ ಯು ವಿನಲ್ಲಿ ಬಿಟ್ಟಿದ್ದರಿಂದ ಮಗು ಸಾವು; ಟೆಕ್ಸಾಸ್ ನಲ್ಲಿ ಬೇಜವಾಬ್ದಾರಿ ಘಟನೆ

ಸ್ಯಾನ್ ಅಂಟೋನಿಯಾ ಪ್ರದೇಶದ ವಾಲ್ಮಾರ್ಟ್ ನಿಲುಗಡೆ ಪ್ರದೇಶದಲ್ಲಿ ಎಸ್ ಯು ವಿ ಕಾರಿನಲ್ಲಿ ಇಡೀ ದಿನ ಏಳು ತಿಂಗಳ ಮಗುವೊಂದನ್ನು ಬಿಟ್ಟು ಹೋದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಿಲಾಟ್ಸ್:  ಸ್ಯಾನ್ ಅಂಟೋನಿಯಾ ಪ್ರದೇಶದ ವಾಲ್ಮಾರ್ಟ್ ನಿಲುಗಡೆ ಪ್ರದೇಶದಲ್ಲಿ ಎಸ್ ಯು ವಿ ಕಾರಿನಲ್ಲಿ ಇಡೀ ದಿನ ಏಳು ತಿಂಗಳ ಮಗುವೊಂದನ್ನು ಬಿಟ್ಟು ಹೋದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಹಿಲಾಟ್ಸ್ ನ ವಾಲ್ಮಾರ್ಟ್ ಅಂಗಡಿಯಲ್ಲಿ ಕೆಲಸ ಮಾಡುವ ಮಗುವಿನ ತಂದೆ, ಶುಕ್ರವಾರ ಬೆಳಗ್ಗೆ 6:15 ಕ್ಕೆ ಕೆಲಸಕ್ಕೆ ತೆರಳುವ ಮುಂಚಿತವಾಗಿ ಮಗುವನ್ನು ಡೇ ಕೇರ್ ನಲ್ಲಿ ಬಿಡುವುದನ್ನು ಮರೆತಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಹಿಲಾಟ್ಸ್ ನ ಪೊಲೀಸ್ ಕ್ಯಾಪ್ಟನ್ ಆಂಟನಿ ಬರ್ಗೆಸ್ ಹೇಳಿದ್ದಾರೆ. ಕೆಲಸ ಮುಗಿಸಿ ತನ್ನ ಎಸ್ ಯು ವಿ ಗೆ ಹಿಂದಿರುಗಿದಾಗ ಮಗು ಮೃತಪಟ್ಟಿರುವುದನ್ನು ತಂದೆ ನೋಡಿದ್ದಾನೆ. ತಂದೆ ಎದೆ ನೋವು ಎಂದು ದೂರಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಬರ್ಗೆಸ್ ಹೇಳಿದ್ದಾರೆ. 
ಇನ್ನು ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಮತ್ತು ತಂದೆ ಮಗುವಿನ ಗುರುತನ್ನು ಇನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಈ ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆ ಉಷ್ಣಾಂಶ 100 ಡಿಗ್ರಿ ಫ್ಯಾರನ್ ಹೀಟ್ ವರೆಗೂ ಏರುತ್ತದೆ. 
ಅಮೇರಿಕಾದಲ್ಲಿ ಬಿಸಿ ಕಾರುಗಳಲ್ಲಿ ಸಿಲುಕಿ ಮೃತ ಪಟ್ಟ ಮಕ್ಕಳ ಸಂಖ್ಯೆ ಇದರಿಂದ್ 27 ಕ್ಕೆ ಏರಿದ್ದು, ಟೆಕ್ಸಾಸ್ ನಲ್ಲಿಯೇ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಕಿಡ್ಸ್ಅಂಡ್ ಕಾರ್ಸ್[ಡಾಟ್]ಆರ್ಗ್ ಸಂಸ್ಥೆಯ ಅಧ್ಯಕ್ಷ ಜಯಾನೆಟ್ ಫೆನ್ನೆಲ್ ಹೇಳಿದ್ದಾರೆ. 
ಮಕ್ಕಳನ್ನು ಕಾರುಗಳಲ್ಲಿ ಬಿಟ್ಟು ಹೋಗುವಾಗ ಪೋಷಕರು ಹಿಂದಿನ ಬಾಗಿಲನ್ನು ತೆಗೆದುಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಫೆನ್ನೆಲ್ ಹೇಳಿದ್ದಾರೆ. ಹಿಂದಿನ ಸೀಟಿನಲ್ಲಿ ಫೋನುಗಳನ್ನು ಬಿಟ್ಟರು ಸಹಕಾರಿಯಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com