
ಇಸ್ಲಾಮಾಬಾದ್: ಭಾರತೀಯ ಬಾಲಕನೊಬ್ಬ ಯಾವುದೇ ಪ್ರವಾಸಿ ದಾಖಲೆಗಳಿಲ್ಲದೆ ಲಾಹೋರ್ ತಲುಪಿದ್ದು ಆತನನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಬಾಲಕನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ಹೆಸರನ್ನು ಮೊಹಮ್ಮದ್ ಅಸ್ಲಂ ಎಂದು ಹೇಳಿದ್ದು, ಸಂಜೌತಾ ಎಕ್ಸ್ ಪ್ರೆಸ್ ಮೂಲಕ ಭಾರತದಿಂದ ಲಾಹೋರಿಗೆ ತಲುಪಿದ್ದು ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಿಗಿ ಭದ್ರತೆಯ ನಡುವೆಯೂ ಈ ಬಾಲಕ ಪಂಜಾಬ್ ರಾಜಧಾನಿ ತಲುಪಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಅಸ್ಲಂ ಬಳಿ ಭಾರತದ ಕರೆನ್ಸಿ ಬಿಟ್ಟು ಮತ್ತೇನು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement