ವೇಗವಾಗಿ ಕಾರುಚಲಾಯಿಸುತ್ತಿದ್ದ ಕಿವುಡನಿಗೆ ಗುಂಡಿಕ್ಕಿದ ಅಮೆರಿಕ ಪೊಲೀಸರು

ಅತಿಯಾದ ವೇಗದಿಂದ ಕಾರುಚಲಾಯಿಸುತ್ತಿದ್ದ ಮತ್ತು ಸೂಚನೆ ಪಾಲಿಸದ ಹಿನ್ನಲೆಯಲ್ಲಿ ಮಿಯಾಮಿ ಪೊಲೀಸರು ಯುವಕನೋರ್ವನನ್ನು ಗುಂಡಿಕಿ ಹತ್ಯೆಗೈದಿದ್ದಾರೆ.
ಪೊಲೀಸರಿಂದ ಹತ್ಯೆಗೀಡಾದ ಹ್ಯಾರಿಸ್ (ಎಫ್ ಪಿ ಚಿತ್ರ)
ಪೊಲೀಸರಿಂದ ಹತ್ಯೆಗೀಡಾದ ಹ್ಯಾರಿಸ್ (ಎಫ್ ಪಿ ಚಿತ್ರ)

ಮಿಯಾಮಿ: ಅತಿಯಾದ ವೇಗದಿಂದ ಕಾರುಚಲಾಯಿಸುತ್ತಿದ್ದ ಮತ್ತು ಸೂಚನೆ ಪಾಲಿಸದ ಹಿನ್ನಲೆಯಲ್ಲಿ ಮಿಯಾಮಿ ಪೊಲೀಸರು ಯುವಕನೋರ್ವನನ್ನು ಗುಂಡಿಕಿ ಹತ್ಯೆಗೈದಿದ್ದಾರೆ.

ದಕ್ಷಿಣ ಅಮೆರಿಕದ ಉತ್ತರ ಕ್ಯಾರೆಲಿನಾದಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ಯುವಕನನ್ನು 29 ವರ್ಷದ ಡೇನಿಯಲ್ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ಕಾರು  ಚಲಾಯಿಸುತ್ತಿದ್ದ ಹ್ಯಾರಿಸ್ ನನ್ನು ಶಂಕಿಸಿದ ಪೊಲೀಸರು ಅತನನ್ನು ತಡೆಯಲೆತ್ನಿಸಿದ್ದಾರೆ. ಈ ವೇಳೆ ಹಿಂದಿನಿಂದ ಚೇಸ್ ಮಾಡಿದ ಪೊಲೀಸರು ಆತನನ್ನು ಕಾರು ನಿಲ್ಲಿಸುವಂತೆ ಜೋರಾಗಿ  ಕೂಗಿದ್ದಾರೆ. ಆದರೆ ಆತ ಕಾರುನಿಲ್ಲಿಸದೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ನೀಡಿದ ಸೂಚನೆಗಳನ್ನೂ ಕೂಡ ನಿರ್ಲಕ್ಷಿಸಿದ್ದಾನೆ.

ಇದರಿಂದ ಪೊಲೀಸರು ಗುಂಡುಹಾರಿಸಿದ್ದು, ಗುಂಡೇಟಿನಿಂದಾಗಿ ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಕಾರನ್ನು ಪೊಲೀಸರು ಶೋಧ ನಡೆಸಿದ್ದು, ಕಾರಿನಲ್ಲಿ ಯಾವುದೇ ರೀತಿಯ  ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ.

ಹ್ಯಾರಿಸ್ ಮೂಲತಃ ಶವರ್ಲೆಟ್ ಪ್ರಾಂತ್ಯದ ನಿವಾಸಿಯಾಗಿದ್ದು, ಅತನ ಸಂಬಂಧಿಕರು ತಿಳಿಸಿರುವಂತೆ ಆತ ಹುಟ್ಟಿನಿಂದಲೇ ಕಿವುಡನಂತೆ. ಕಾರನ್ನು ವೇಗವಾಗಿ ಚಲಾಯಿಸುವ ಹವ್ಯಾಸ  ಹೊಂದಿದ್ದ ಹ್ಯಾರಿಸ್ ನಿನ್ನೆ ಕಾರನ್ನು ತೆಗೆದುಕೊಂಡು ಹೋಗಿದ್ದ. ಆದರೆ ಸಂಜೆ ವೇಳೆಗೆ ಪೊಲೀಸರು ಆತನನ್ನು ಕೊಂದ ವಿಚಾರ ತಿಳಿಯಿತು ಎಂದು ಸಂಬಂಧಿಕರೊಬ್ಬರು ತಮ್ಮ ಅಳಲು  ತೋಡಿಕೊಂಡಿದ್ದಾರೆ.

ಇನ್ನು ಹ್ಯಾರಿಸ್ ಹುಟ್ಟು ಕಿವುಡನಾಗಿದ್ದು, ಕಿವುಡನಾದ ಆತನಿಗೆ ಪೊಲೀಸ್ ವಾಹನಗಳ ಸೈರನ್ ಕೇಳಲು ಹೇಗೆ ಸಾಧ್ಯ. ಪೊಲೀಸರ ಈ ಎನ್ಕೌಂಟರ್ ಮಾನವೀಯತೆಗೆ ವಿರುದ್ಧವಾದದ್ದು ಎಂದು  ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ ಹ್ಯಾರಿಸ್ ಪೋಷಕರು ತಮ್ಮ ಮಗನ ಸಾವಿನ ಕುರಿತು ಆನ್ ಲೈನ್ ಪ್ರತಿಭಟನೆಗೆ ಇಳಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಯಾಮಿ  ಪೊಲೀಸರ ಕೃತ್ಯದ ವಿರುದ್ಧ ಆಂದೋಲನ ನಡೆಸಿದ್ದಾರೆ. ಅಲ್ಲದೆ ಪುತ್ರನ ಅಂತ್ಯಕ್ರಿಯೆಯ ಸಂಪೂರ್ಣ ಖರ್ಚನ್ನು ಪೊಲೀಸರೇ ವಹಿಸಿಕೊಳ್ಳಬೇಕು ಎಂದು ಆಗ್ರಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com