ಭಾರತ ಸಲ್ಲಿಸಿದ್ದ ದಾವೂದ್​ನ ಪಾಕಿಸ್ತಾನದ 6 ವಿಳಾಸಗಳು ಸರಿ: ವಿಶ್ವಸಂಸ್ಥೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪಾಕಿಸ್ತಾನದ ವಿಳಾಸಗಳಿಗೆ ಸಂಬಂಧಿಸಿದಂತೆ ಭಾರತ ವಿಶ್ವಸಂಸ್ಥೆಗೆ ಸಲ್ಲಿಸಿದ್ದ 9 ದಾಖಲೆಗಳ ಪೈಕಿ...
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
ವಿಶ್ವಸಂಸ್ಥೆ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪಾಕಿಸ್ತಾನದ ವಿಳಾಸಗಳಿಗೆ ಸಂಬಂಧಿಸಿದಂತೆ ಭಾರತ ವಿಶ್ವಸಂಸ್ಥೆಗೆ ಸಲ್ಲಿಸಿದ್ದ 9 ದಾಖಲೆಗಳ ಪೈಕಿ 6 ಸರಿ ಮತ್ತು ಮೂರು ವಿಳಾಸಗಳು ತಪ್ಪು ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ನಡೆಸಿದ ಪರಿಶೀಲನೆಯಲ್ಲಿ ಭಾರತ ಸಲ್ಲಿಸಿದ್ದ 9 ವಿಳಾಸಗಳ ಪೈಕಿ 3 ವಿಳಾಸಗಳು ತಪ್ಪು ಎಂದು ತಿಳಿದು ಬಂದಿದೆ. ಅದರಲ್ಲಿ ಒಂದು ವಿಳಾಸ ವಿಶ್ವಸಂಸ್ಥೆಯ ಪಾಕಿಸ್ತಾನದ ರಾಯಭಾರಿ ಮಲೇಹಾ ಲೋಧಿ ಅವರಿಗೆ ಸೇರಿದ್ದು ಎಂದು ಸಮಿತಿ ತಿಳಿಸಿದೆ. ಆದರೆ ಉಳಿದ 6 ವಿಳಾಸಗಳನ್ನು ಯಾವುದೇ ತಿದ್ದುಪಡಿ ಮಾಡದೆ ಪಟ್ಟಿಯಲ್ಲಿ ಉಳಿಸಲಾಗಿದೆ.
ಕರಾಚಿಯ ಮಾರ್ಗಲ್ಲಾ ರೋಡ್​ನ ಎಫ್-6/2, 22ನೇ ರಸ್ತೆ, ಮನೆ ನಂ 07 ವಿಳಾಸವು ಮಲೇಹಾ ಲೋಧಿ ಅವರಿಗೆ ಸೇರಿದೆ. ಜತೆಗೆ ಕರಾಚಿಯ ಕ್ಲಿಫ್ಟನ್​ನ ತಲ್ವಾರ್ ಪ್ರದೇಶದ ಪರದೇಸಿ ಮನೆ ನಂ. 3, ಮೆಹ್ರಾನ್ ಚೌಕ, 8ನೇ ಮಹಡಿಯ ಮನೆ ಮತ್ತು 6/ಎ, ಜೌಬಮ್ ತಾಂಜೀಮ್ 5 ನೇ ಹಂತ, ರಕ್ಷಣಾ ವಸತಿ ಸಂಕೀರ್ಣ, ಕರಾಚಿ ಈ ವಿಳಾಸಗಳೂ ಸಹ ತಪ್ಪು ಎಂದು ವಿಶ್ವಸಂಸ್ಥೆ ತಿಳಿಸಿದೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಆರೋಪಿಸಿರುವ ಭಾರತ ಆ ಸಂಬಂಧ ವಿವರವಾದ ಕಡತವನ್ನು ಸಿದ್ಧಪಡಿಸಿ ಕಳೆದ ವರ್ಷ ಆಗಸ್ಟ್​ನಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಿತ್ತು. ಅದರಲ್ಲಿ 9 ವಿಳಾಸಗಳನ್ನು ಪಟ್ಟಿ ಮಾಡಿ ದಾವೂದ್ ಇಬ್ರಾಹಿಂ ಈ ವಿಳಾಸಗಳಲ್ಲಿ ನಿರಂತರವಾಗಿ ತನ್ನ ವಾಸ್ತವ್ಯವನ್ನು ಬದಲಿಸುತ್ತಿರುತ್ತಾನೆ ಎಂದು ತಿಳಿಸಿತ್ತು. ಆದರೆ ಪಾಕಿಸ್ತಾನ ಮಾತ್ರ ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ವಾದಿಸುತ್ತಲೇ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com