ಇಟಲಿಯಲ್ಲಿ ಪ್ರಬಲ ಭೂಕಂಪ: 20 ಸಾವು, ಧರೆಗುರುಳಿದ ಹಲವು ಕಟ್ಟಡಗಳು

ಇಟಲಿಯಲ್ಲಿ ಮುಂಜಾನೆ 3.30 ಸುಮಾರಿಗೆ ಸಂಭವಿಸಿದ ಭೂಕಂಪದಿಂದ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ...
ಭೂಕಂಪನ
ಭೂಕಂಪನ

ರೋಮ್: ಇಟಲಿಯಲ್ಲಿ ಮುಂಜಾನೆ 3.30 ಸುಮಾರಿಗೆ ಸಂಭವಿಸಿದ ಭೂಕಂಪದಿಂದ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ.

ಭೂಕಂಪನದ ರೌದ್ರಾವತಾರಕ್ಕೆ ಅನೇಕ ಕಟ್ಟಡಗಳು ಉರುಳಿ ಬಿದ್ದಿವೆ ಹಾಗೂ ಪರ್ವತಪ್ರದೇಶದ ಹಲವು ಹಳ್ಳಿಗಳು ಭೂಕುಸಿತದಿಂದಾಗಿ ನಾಶವಾಗಿವೆ.

ಹಲವು ಕಟ್ಟಡಗಳು ಉರುಳಿ ಬಿದ್ದಿದ್ದರಿಂದ ಸಾವು ನೋವುಗಳ ಸಂಖ್ಯೆ ಹೆಜ್ಜಾಗುವ ಸಾಧ್ಯತೆಗಳು ಇವೆ. ಮಧ್ಯ ಇಟಲಿಯ ಉಂಬ್ರಿಯ ಮತ್ತು ಲೀ ಮಾರ್ಚೆ ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿದೆ. ಅಮೆರಿಕ ಭೂವಿಜ್ಞಾನ ಸರ್ವೆ ಕೇಂದ್ರ ರಿಕ್ಟರ್ ಮಾಪಕದಲ್ಲಿ 6.2 ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪದಿಂದಾಗಿ ಇಟಲಿಯ ಅರ್ಧದಷ್ಟು ನಗರ ನೆಲಸಮವಾಗಿದೆ ಎಂದು ರೋಮ್ ಮೇಯರ್ ಸೆರಿಗೋ ಪಿರಿಜ್ಜಿ ಹೇಳಿದ್ದಾರೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com