1951ರಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದ್ದ "ಐತಿಹಾಸಿಕ ಯುದ್ಧ ನೌಕೆ" ಪತ್ತೆ!

2ನೇ ವಿಶ್ವಯುದ್ಧದಲ್ಲಿ ಬಳಕೆ ಮಾಡಲ್ಪಟ್ಟಿದ್ದ ಹಾಗೂ 1951ರಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಅಮೆರಿಕದ ಐತಿಹಾಸಿಕ ಯುದ್ಧ ನೌಕೆಯನ್ನು ಸಮುದ್ರ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಮುಳುಗಡೆಯಾಗಿರುವ ಯುಎಸ್ ಎಸ್ ಇಂಡಿಪೆಂಡೆನ್ಸ್ ಯುದ್ಧ ನೌಕೆ (ಯೂಟ್ಯೂಬ್ ಚಿತ್ರ)
ಮುಳುಗಡೆಯಾಗಿರುವ ಯುಎಸ್ ಎಸ್ ಇಂಡಿಪೆಂಡೆನ್ಸ್ ಯುದ್ಧ ನೌಕೆ (ಯೂಟ್ಯೂಬ್ ಚಿತ್ರ)

ಕ್ಯಾಲಿಫೋರ್ನಿಯಾ: 2ನೇ ವಿಶ್ವಯುದ್ಧದಲ್ಲಿ ಬಳಕೆ ಮಾಡಲ್ಪಟ್ಟಿದ್ದ ಹಾಗೂ 1951ರಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಅಮೆರಿಕದ ಐತಿಹಾಸಿಕ ಯುದ್ಧ ನೌಕೆಯನ್ನು ಸಮುದ್ರ ಸಂಶೋಧಕರು  ಪತ್ತೆ ಹಚ್ಚಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ಕರವಾಳಿ ತೀರದಲ್ಲಿ ಸುಮಾರು ಅರ್ಧ ಮೈಲು ಸಮುದ್ರದಳಾದಲ್ಲಿ ಈ ಐತಿಹಾಸಿಕ ಯುದ್ಧ ನೌಕೆ ಯುಎಸ್ ಎಸ್ ಇಂಡಿಪೆಂಡೆನ್ಸ್ ಪತ್ತೆಯಾಗಿದೆ. ಅಮೆರಿಕದ  ಖ್ಯಾತ ಸಮುದ್ರ ಸಂಶೋಧಕರು ಈ ಯುದ್ಧ ನೌಕೆಯನ್ನು ಪತ್ತೆ ಮಾಡಿದ್ದು, ಮಾನವ ರಹಿತ ಶೋಧಕ ಹಡಗು ನಾಟಿಲಸ್ ನ ಮುಖಾಂತರ ಸುಮಾರು 20 ಗಂಟೆಗಳ ನಿರಂತರ ಶೋಧದ ಮೂಲಕ  ಐತಿಹಾಸಿಕ ಯುದ್ಧ ನೌಕೆಯನ್ನು ಪತ್ತೆ ಮಾಡಲಾಗಿದೆ.

ಸಮುದ್ರಕ್ಕೆ ಇಳಿದ ನಾಟಿಲಸ್ ಸಮುದ್ರ ಶೋಧಕ ನೌಕೆ ಸುಮಾರು 20 ಗಂಟೆಗಳ ಸುಧೀರ್ಘ ಪ್ರಯಾಣದ ಬಳಿಕ ಸಮುದ್ರದಾಳದಲ್ಲಿ ವಿಮಾನವನ್ನು ಪತ್ತೆ ಮಾಡಿತ್ತು. ಆರಂಭದಲ್ಲಿ ಇದನ್ನು ಈ  ಹಿಂದೆ ಪತನವಾಗಿದ್ದ ಅಮೆರಿಕದ ಯುದ್ಧ ವಿಮಾನ ಎಂದೇ ಭಾವಿಸಲಾಗಿತ್ತು. ಆದರೆ ಯುದ್ಧ ವಿಮಾನ ಯಾವುದೊ ಒಂದು ನೌಕೆಯ ಮೇಲೆ ಇರುವಂತೆ ಭಾಸವಾಗಿತ್ತು. ಆಗ ನಾಟಿಲಸ್ ಶೋಧಕ  ತಂಡ ನೌಕೆಯನ್ನು ಮತ್ತಷ್ಟು ಕೆಳಕ್ಕೆ ಇಳಿಸಿದಾಗ ಯುದ್ಧನೌಕೆಯಲ್ಲಿದ್ದ ವಿಮಾನಪತಮ ಗನ್ ಪತ್ತೆಯಾಯಿತು. ಆಗಲೇ ಶೋಧಕರಿಗೆ ಇದು 1951ರಲ್ಲಿ ಮುಳಗಡೆಯಾದ ಯುಎಸ್ ಎಸ್  ಇಂಡಿಪೆಂಡೆನ್ಸ್ ಯುದ್ಧ ನೌಕೆ ಎಂದು ಮನವರಿಕೆಯಾಯಿತು.

ನಾಟಿಲಸ್ ಶೋಧಕ ನೌಕೆಯು ಯುಎಸ್ ಎಸ್ ಇಂಡಿಪೆಂಡೆನ್ಸ್ ಯುದ್ಧ ನೌಕೆಯನ್ನು ಪತ್ತೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ವಿಶ್ವಾದ್ಯಂತ  ಸುಮಾರು 30ಕ್ಕೂ ಅಧಿಕ ದೇಶಗಳ ಜನರು ಈ ವಿಡಿಯೋವನ್ನು ನೋಡಿದ್ದಾರೆ.

ಅಮೆರಿಕದ ಐತಿಹಾಸಿಕ ಯುಎಸ್ ಎಸ್ ಇಂಡಿಪೆಂಡೆನ್ಸ್ ಯುದ್ಧ ನೌಕೆ 2ನೇ ವಿಶ್ವಯುದ್ಧದಲ್ಲಿ ಭಾಗಿಯಾಗಿತ್ತು. ಅಲ್ಲದೆ ಆ ಸಂದರ್ಭದಲ್ಲಿಯೇ ಇದೇ ಯುದ್ಧನೌಕೆಯ ಮೂಲಕ ಫೆಸಿಫಿಕ್  ಮಹಾಸಾಗದಲ್ಲಿ ಅಮೆರಿಕ ಅಣು ಬಾಂಬ್ ಪರೀಕ್ಷೆ ಕೂಡ ಮಾಡಿತ್ತು. ಹೀಗಾಗಿ ಮುಳುಗಡೆಯಾಗಿರುವ ಈ ನೌಕೆಯಲ್ಲಿ ಅಣು ಸೋರಿಕೆಯಾಗಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದು, ಈ ಬಗ್ಗೆ  ಸಂಶೋಧನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com